IPL Auction 2023 : ರಾಜ್ಯದ ಕೇವಲ ನಾಲ್ವರು ಆಟಗಾರರು ಮಾರಾಟ
ಈ ಬಾರಿಯ ಹರಾಜಿನಲ್ಲಿ ಕರ್ನಾಟಕದ 16 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. ಆದರೆ ಆಯ್ಕೆಯಾಗಿದ್ದು ನಾಲ್ವರು ಆಟಗಾರರು ಮಾತ್ರ.
ಕರ್ನಾಟಕ ಪರ ಮಯಾಂಕ್ ಅಗರ್ವಾಲ್ ಸನ್ರೈಸರ್ಸ್ ತಂಡಕ್ಕೆ 8.25 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಸನ್ ರೈಸರ್ಸ್ ತಂಡಕ್ಕೆ ನಾಯಕನಾಗುವ ಅವಕಾಶವೂ ಇದೆ.
ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಡೆಲ್ಲಿ ತಂಡಕ್ಕೆ 2.40 ಕೋಟಿ ರೂ,ಮನೋಜ್ ಆರ್ಸಿಬಿ ತಂಡಕ್ಕೆ 20 ಲಕ್ಷ ರೂ., ದೇಸಿ ಟೂರ್ನಿಯಲ್ಲಿ ಮಿಂಚಿರುವ ವೇಗಿ ವಿದ್ವತ್ ಕಾವೇರಪ್ಪ ಪಂಜಾಬ್ ತಂಡಕ್ಕೆ 20 ಲಕ್ಷ ರೂ, ಮಾರಾಟವಾದರು.
ಕೆ.ಎಲ್,ರಾಹುಲ್, ದೇವದತ್ ಪಡಿಕಲ್, ಕೆ.ಸಿ.ಕರಿಯಪ್ಪ, ಪ್ರಸಿದ್ಧ ಕೃಷ್ಣ, ಕೆ.ಗೌತಮ್ ಹಾಗೂ ಅಭಿನವ್ ಮನೋಹರ್ ಹರಾಜಿಗೂ ಮುನ್ನವೇ ರಿಟೈನ್ ಆದರು.
ಶುಭಾಂಗ್ ಹೆಗಡೆ, ಜೆ ಸುಚೀತ್, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಮಾರಾಟವಾಗಲಿಲ್ಲ.








