Wedding : ತಾಯಿಯ ಕೊನೆ ಆಸೆ ಈಡೇರಿಸಲು ICU ನಲ್ಲಿ ಮದುವೆಯಾದ ಮಗಳು
ಮಗಳೊಬ್ಬಳ ತನ್ನ ತಾಯಿಯ ಕೊನೆಯಾಸೆ ಈಡೇರಿಸುವ ಸಲುವಾಗಿ ICU ನಲ್ಲಿಯೇ ಮದುವೆಯಾಗಿರುವಂತಹ ಘಟನೆ ಬಿಹಾರದಲ್ಲಿ ನಡೆದಿದೆ.. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಬಿಹಾರದ ಗಯಾ ನಿವಾಸಿ ಪೂನಂ ಮಗಧ್ ಎಂಬಾಕೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಗಯಾದ ಮ್ಯಾಜಿಸ್ಟ್ರೇಟ್ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು ಎಂದು ವೈದ್ಯರು ಕುಟುಂಬ ಸದಸ್ಯರಿಗೆ ಸೂಚಿಸಿದ್ದರು. ಈ ಹಿನ್ನೆಲೆ ಮಗಳು ICU ನಲ್ಲೇ ವಿವಾಹವಾಗಿದ್ದಾರೆ..
https://twitter.com/i/status/1607326571429507074








