Shikhar Dhawan : ಗಬ್ಬರ್ ಆಟ ಅಂತ್ಯವಾಯಿತಾ ?? ಶ್ರೀಲಂಕಾ ಸೀರೀಸ್ ನಿಂದ ಹೊರಬಿದ್ದಿದ್ದೇಕೆ ???
ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಆದರೇ ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ರಿಷಬ್ ಪಂಥ್ ಗೆ ಕೋಕ್ ಕೊಡಲಾಗಿದೆ. ಇದು ಇದೀಗ ಕ್ರಿಕೆಟ್ ತಜ್ಞರ ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವು ಕ್ರಿಕೆಟ್ ಪಂಡಿತರ ಪ್ರಕರ ವೈಟ್ ಬಾಲ್ ಕ್ರಿಕೆಟ್ ನಿಂದ ಪಂಥ್ ರನ್ನ ಕೈಬಿಡಲಾಗಿದ್ದು ಕೇವಲ ಟೆಸ್ಟ್ ತಂಡದಲ್ಲಿ ಮಾತ್ರ ಮುಂದುವರೆಯಲಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೇ ಇನ್ನು ಕೆಲವರು ಹೇಳುವ ಪ್ರಕಾರ ಈ ಸರಣಿಯಲ್ಲಿ ಕೇವಲ ವಿಶ್ರಾಂತಿ ಮಾತ್ರ ನಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದರ ಚರ್ಚೆ ನಡುವೆ ಮತ್ತೊಬ್ಬ ಆಟಗಾರ ಸದ್ದಿಲ್ಲದೇ ಕಡಗಣೆನೆಗೆ ಒಳಗಾಗುತ್ತಿದ್ದಾರೆ. ಅದು ಶಿಖರ್ ಧವನ್ “ ಬಿಸಿಸಿಐ ಪ್ರಕಟಿಸಿದ ಏಕದಿನ ತಂಡದಿಂದ ಶಿಖರ್ ಧವನ್ ಹೆಸರು ಕಣ್ಮರೆಯಾಗಿದ್ದು ಈತನ ವೃತ್ತಿ ಜೀವನ ಅಂತ್ಯವಾಯಿತ ಎಂಬ ಪ್ರಶ್ನೆ ಉದ್ಭವವಾಗಿದೆ. ನಿನ್ನೆ ಸಂಜೆ ಟೀಮ್ ಪ್ರಕಟವಾದ ನಂತರ ಧವನ್ ಹೆಸರಿಲ್ಲದಿರುವುದನ್ನ ಕಂಡ ಕೆಲವವರು ಈ ಕುರಿತು ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಟೆಸ್ಟ್ ಮತ್ತು ಟಿ20 ಯಿಂದ ಹೊರಬಿದ್ದಿರುವ 35 ವರ್ಷದ ಧವನ್, ಶ್ರೀಲಂಕಾ ಸೀರಿಸ್ ಅಲ್ಲಿ ಜಾಗ ಕಂಡುಕೊಳ್ಳಲು ವಿಫಲರಾಗಿದ್ದಾರೆ. ಇದು ಮುಂಬರುವ 2023 ವಿಶ್ವಕಪ್ ಗೂ ಪರಿಗಣೆನೆಯಾಗುವ ಸಾಧ್ಯತೆ ಕಡಿಮೆ ಎನ್ನವುದನ್ನ ಸೂಚಿಸುತ್ತಿದೆ. ಆದರೇ ಈ ವರ್ಷ 22 ODI ಪಂದ್ಯಗಳಿಂದ 688 ರನ್ ಗಳಿಸಿದಾಗ್ಯೂ ತಂಡದಿಂದ ಹೊರಬಿಟ್ಟಿರುವುದು ಯಾವ ಲಾಜಿಕ್ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದು ಈ ವರ್ಷದ ಎರಡನೇ ಅತಿದೊಡ್ಡ ಸ್ಕೋರ್ ಆಗಿದೆ. ಕೊಹ್ಲಿ ರೋಹಿತ್ ರಾಹುಲ್ ಸೂರ್ಯಕುಮಾರ್ ಯಾದವ್ ಇವರ್ಯಾರು ಈ ಸ್ಕೂರ್ ನ ಹತ್ತಿರವೂ ಸುಳಿದಿಲ್ಲ. ಇದು ಆಯ್ಕೆ ಸಮಿತಿ ಮತ್ತೊಮ್ಮೆ ಎಡವುತ್ತಿರುವ ಸೂಚನೆ.
2022 ರಲ್ಲಿ ಸ್ಟಾರ್ ಸೀನಿಯರ್ ಗಳು ದೊಡ್ಡ ದೊಡ್ಡ ಪಂದ್ಯಗಳಲ್ಲಿ ಬ್ಯೂಸಿ ಇದ್ದಾಗ ಶಿಖರ್ ಯವ ಬ್ರಿಗೇಡ್ ಅನ್ನ ಮುನ್ನಡೆಸಿದ್ದಾರೆ. ಈ ವರ್ಷ ಜನವರಿಯಲ್ಲಿ ನಡೆದ ODI ಸೀರಿಸ್ ನಲ್ಲಿ ಧವನ್ ಎರಡು ಅರ್ಧಶತಕ ಭಾರಿಸಿದ್ದರು. ಪಾರ್ಲ್‌ನಲ್ಲಿ 79 ಕೇಪ್‌ಟೌನ್‌ನಲ್ಲಿ 61 ರನ್ . ಇಂಗ್ಲೆಂಡ್ ಪ್ರವಾಸ ನಿರಾಶಾದಾಯಕವಾಗಿತ್ತು. ಆದರೇ ಮತ್ತೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ಘರ್ಜಿಸಿದ ಧವನ್ 97 ಮತ್ತು 58 ರನ್ ಕಲೆಹಾಕಿದ್ದರು. ಜಿಂಬಾಬ್ವೆ ಸರಣಿಯಲ್ಲಿ ಔಟಾಗದೇ 81 ರನ್ ಗಳಿಸಿದ್ದರು. ನ್ಯೂಜಿಲೆಂಡ್ ನ ಆಂಕ್ಲೆಂಡ್ ನಲ್ಲೂ ಆಕರ್ಷಕ ಅರ್ಧಶತಕ ಗಳಿಸಿದ್ದರು.
ಆದರೇ ಬಾಂಗ್ಲಾ ಸರಣಿಯಲ್ಲಿ ಧವನ್ ವಿಫಲವಾಗಿದ್ದು, ಇಶಾನ್ ಕಿಶಾನ್ 200 ರನ್ ಭಾರಿಸಿದ್ದು, ಆಯ್ಕೆಗಾರರ ಲೆಕ್ಕಾಚಾರವನ್ನ ತಲೆಕೆಳಗು ಮಾಡಿದೆ. ಬಿಸಿಸಿಐ ನಿನ್ನೆ ರಾತ್ರಿ ಧವನ್ ಗೆ ಅವರಿಗೆ ಶಾಕ್ ನೀಡಿದ್ದು, ಶ್ರೀಲಂಕಾ ಸೀರಿಸ್ ನಿಂದ ಕೈ ಬಿಡಲಾಗಿದೆ. ಇದು ಧವನ್ ದುರಾದೃಷ್ಟ. ಸಧ್ಯದ ಎಲ್ಲಾ ಸೂಚನೆಗಳು ಧವನ್ ಭಾರತ ತಂಡದಿಂದ ದೂರವಾಗುವ ಕಡೆಗೆ ತೋರುತ್ತಿವೆ.
Shikhar Dhawan : Gabbar game over?? Why are Sri Lanka out of the series???