Worlds Most Weakest Currency : ವಿಶ್ವದ ದುರ್ಬಲ ಕರೆನ್ಸಿಗಳು – ನಮ್ಮ ರೂಪಾಯಿಗೆಷ್ಟು ಪವರ್ ಇದೆ ಗೊತ್ತಾ..??
ಭಾರತದ ರೂಪಾಯಿ ಮೌಲ್ಯ ಜಾಗತಿಕ ಮಟ್ಟದಲ್ಲಿ ತುಂಬಾನೆ ಕಡಿಮೆ ಅನ್ನೋದು ಅನೇಕರ ವಾದ. ಹಾ.. ಅನೇಕ ಮುಂದುವರೆದ ರಾಷ್ಟ್ರಗಳ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯವು ಅತ್ಯಂತ ಕಡಿಮೆಯೇ. ಆದ್ರೆ ಭಾರತದ ರೂಪಾಯಿ ಮೌಲ್ಯ ಜಗತ್ತಿನಲ್ಲೇ ಎಲ್ಲಾ ಕರೆನ್ಸಿಗಳಿಗಿಂತ ದುರ್ಬಲವೂ ಅಲ್ಲ ಅನ್ನೋ ವಿಚಾರವೂ ನಮಗೆಲ್ಲಾ ಗೊತ್ತಿದೆ. ನಿಮಗೆಲ್ಲಾ ಆಶ್ಚರ್ಯ ಆಗಬಹುದು ಆದ್ರೆ ನಂಬಲೇಬೇಕಾದ ಸಂಗತಿ ಅಂದ್ರೆ ಬಾರತಕ್ಕಿಂತಲೂ ಅತೀ ಕಡಿಮೆ ಮೌಲ್ಯದ ಕರೆನ್ಸಿ ಹೊಂದಿರುವ ದೇಶಗಳೂ ವಿಶ್ವದಲ್ಲಿವೆ. ಉದಾಹರಣಗೆ ಭಾರತದ 1 ರೂಪಾಯಿಯ ಮೌಲ್ಯ 1570 ರೂಪಾಯಿ ಕೂಡ ಇದೆ. ಎಸ್ ಈ ವಿಚಾರ ಅನೇಕರಿಗೆ ಗೊತ್ತಿರೋದಿಲ್ಲ.
ವಿಶ್ವದ ಅತ್ಯಂತ ದುಬಾರಿ ಕರೆನ್ಸಿಗಳು ಅಂದ ತಕ್ಷಣ ಕೂವೈತಿ ಡಿನಾರ್, ಅಮೆರಿಕನ್ ಡಾಲರ್, ಯೂರೂಪಿನ್ ಯೂರೋ ಅಮೆರಿಕನ್ ಡಾಲರ್ ಹೀಗೆ ಅನೇಕ ಕರೆನ್ಸಿಗಳು ತಲೆಗೆ ಬರುತ್ವೆ. ಆದ್ರೆ ಅತ್ಯಂತ ದುರ್ಬಲ ಕರೆನ್ಸಿಗಳು ಯಾವುವು. ಯಾವ ದೇಶದ ಕರೆನ್ಸಿಗಳು ಅನ್ನೋದು ತುಂಬ ಜನರಿಗೆ ಗೊತ್ತಿರುವುದಿಲ್ಲ. ಹಾಗಾದ್ರೆ ಜಗತ್ತಿನ 10 ವೀಕೆಸ್ಟ್ ಕರೆನ್ಸಿಗಳು ಯಾವುವು. ಇವತ್ತು ಅದರ ಬಗ್ಗೆ ತಿಳಿಯೋಣ. ಈ ಕರೆನ್ಸಿಗಳ ಬಗ್ಗೆ ತಿಳಿದ್ರೆ ನಿಮಗೆ ಭಾರತ ದೇಶ ಶ್ರೀಮಂತ ರಾಷ್ಟ್ರ ಎಂಬ ಮನೋಭಾವ ಬರೋದ್ರಲ್ಲಿ ನೋ ಡೌಟ್..
ಕಾಂಬೋಡಿಯನ್ ರಿಯಲ್ – ಕಾಂಬೋಡಿಯಾ ರಾಷ್ಟ್ರದ ಕರೆನ್ಸಿ
1 ಭಾರತದ ರೂಪಾಯಿ 53 ಕಾಂಬೋಡಿಯನ್ ರಿಯಲ್ ಗೆ ಸಮ
ಕಾಂಬೋಡಿಯಾ ರಾಷ್ಟ್ರ ತನ್ನ ಪ್ರಾಚೀನ ಸಂಸ್ಕoತಿ ಹಾಗೂ ಪರಿಸರ, ಹಚ್ಚ ಹಸಿರಾದ ವಾತಾವರಣದಿಂದಲೇ ವಿಶ್ವದಲ್ಲಿ ಪ್ರಸಿದ್ಧಿ ಪಡೆದಿರುವ ರಾಷ್ಟ್ರ. ಅಂದ್ಹಾಗೆ ಈ ಕರೆನ್ಸಿ ಜಾಗತಿಕವಾಗಿ ದುರ್ಬಲವಾಗಿರುವುದಕ್ಕೆ ಕಾರಣ ಅಲ್ಲಿನ ಜನರು ಹೆಚ್ಚು ಡಾಲರ್ ಮುಖಾಂತರವೇ ವಹಿವಾಟು ನಡೆಸುವುದು.
ಪರಾಗುಯಾನ್ ಗುರಾನಿ – ಪರಾಗುವೇ
1 ಭಾರತೀಯ ರೂಪಾಯಿ 85 ಪರಾಗುಯಾನ್ ಗುರಾನಿಗೆ ಸಮ
ಪರಾಗುವೇ ದಕ್ಷಿಣ ಅಮೆರಿಕಾದ 2ನೇ ಅತ್ಯಂತ ಬಡ ರಾಷ್ಟ್ರವೂ ಹೌದು. ಸೋಯಾಬೀನ್ಸ್ ಹಾಗೂ ಅತ್ತಿಯನ್ನ ಈ ದೇಶದಿಂದ ಅತಿ ಹೆಚ್ಚು ರಫ್ತು ಮಾಡಲಾಗುತ್ತದೆ. ನಿರುದ್ಯೋಗ, ಭ್ರಷ್ಟಾಚಾರ, ಆರ್ಥಿಕ ಸಂಕಷ್ಟದಿಂದಾಗಿ ಇಲ್ಲಿನ ಜನರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಈ ದೇಶದ ಕರೆನ್ಸಿ ಅತ್ಯಂತ ದುರ್ಬಲಗೊಂಡಿದೆ.
ಲಾವೋಂಟೆನ್ ಕಿಪ್ – ಲಾವೋಸ್
1 ಭಾರತೀಯ ರೂಪಾಯಿ 116 ಲಾವೋಂಟೆನ್ ಕಿಪ್ ಗೆ ಸಮ
ಪೂರ್ವ ಏಷ್ಯಾದಲ್ಲಿ ಬರುವ ಲಾವೋಸ್ ದೇಶದ ರಾಜಧಾನಿ ವೇಯಿಂಟಿಯಾನೆ. ಈ ದೇಶ ಬೌದ್ಧಿಸಂ ಹಾಗೂ ಪರ್ವತ ಶಿಖರಗಳ ತಾಣಕ್ಕೆ ಪ್ರಸಿದ್ಧಿ ಪಡೆದುಕೊಂಡಿದೆ.
ಗ್ಯುನಿಯನ್ ಫ್ರಾಂಕ್ – ಗ್ಯುನಿ
1 ಭಾರತೀಯ ರೂಪಾಯಿ 125 ಗ್ಯುನಿಯನ್ ಫ್ರಾಂಕ್ ಗೆ ಸಮ
ಪಶ್ಚಿಮ ಆಫ್ರಿಕಾದ ಒಂದು ದೇಶವಾಗಿರುವ ಗ್ಯುನಿಯ ರಾಜಧಾನಿ ಕೋಂಕ್ರಿ. ಈ ದೇಶವನ್ನ ಅತಿ ಬಡ ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಗಿದೆ. ಮೂಲಗಳ ಪ್ರಕಾರ ಈ ದೇಶದ ಅತಿ ಹೆಚ್ಚು ಸಂಪತ್ತು ಕೆಲ ಆಯ್ದ ವ್ಯಕ್ತಿಗಳ ಬಳಿಯೇ ಇದೆ. ಹೀಗಾಗಿ ಈ ದೇಶ ಇಂದಿಗೂ ಅತಿ ಬಡ ರಾಷ್ಟ್ರಗಳಲ್ಲಿ ಒಂದಾಗಿ ಉಳಿದಿದೆ. ಇನ್ನೂ ಇಲ್ಲಿನ 50 % ಗಿಂತಲೂ ಹೆಚ್ಚು ಜನರಿಗೆ ಶುದ್ಧ ಕುಡಿಯುವ ನೀರು ಸೇವನೆಯ ಭಾಗ್ಯವೂ ಇಲ್ಲ ಎನ್ನಲಾಗಿದೆ.
ಸಿಯೇರಾ ಲಿಯೋನೆನ್ ಲಿಯೋನ್ – ಸಿಯೇರಾ ಲಿಯೋನ್
1 ಭಾರತೀಯ ರೂಪಾಯಿ 126 ಸಿಯೇರಾ ಲಿಯೋನೆನ್ ಲಿಯೋನ್ ಗೆ ಸಮ
ಪಶ್ಚಿಮ ಆಫ್ರಿಕಾದಲ್ಲಿ ಬರುವ ಈ ರಾಷ್ಟ್ರ ಬಿಳಿ ಮರಳಿನ ಸಮುದ್ರದ ದಡದ ವಿಶೇಷತೆಗಳಿಂದ ಪ್ರಸಿದ್ಧಿ ಪಡೆದಿದೆ. ಡೈಮೆಂಡ್ , ಟೈಟೇನಿಯಮ್, ಆಕ್ಸೈಡ್ ಹಾಗೂ ಚಿನ್ನದಂತಹ ಸಂಪನ್ಮೂಲಗಳ ಮೈನಿಂಗ್ ನಿಂದಲೂ ಗುರುತಿಸಿಕೊಂಡಿದೆ. ಆದ್ರೆ ಈ ದೇಶದಲ್ಲೀ ಇವತ್ತಿಗೂ 60% ಗಿಂತಲೂ ಹೆಚ್ಚು ಜನ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಸ್ಥಿತಿಯಿದೆ.
ಉಜ್ಬೇಕ್ ಸೋಮ್ – ಉಜ್ಬೇಕಿಸ್ತಾನದ ಕರೆನ್ಸಿ
1 ಭಾರತೀಯ ರೂಪಾಯಿ 127 ಉಜ್ಬೇಕ್ ಸೋಮ್ ಗೆ ಸಮ
ಏಷ್ಯಾದ ಒಂದು ರಾಷ್ಟ್ರವಾಗಿರುವ ಉಜ್ಬೇಕಿಸ್ತಾನ್ ನ ರಾಜಧಾನಿ ತಾಶ್ಕೆಂಟ್. ಈ ದೇಶ ಮಸಿದಿಗಳಿಗೆ ಅತಿ ಹೆಚ್ಚು ಪ್ರಸಿದ್ಧಿ ಪಡೆದ ದೇಶ.
ಇಂಡೋನೇಷ್ಯಾ ರೂಪಾಯಿ – ಇಂಡೋನೇಷ್ಯಾ
1 ಭಾರತೀಯ ರೂಪಾಯಿ 204 ಇಂಡೋನೇಷ್ಯಾ ರೂಪಾಯಿಗೆ ಸಮ
ಭಾರತದ ನೆರೆ ರಾಷ್ಟ್ರಗಳಲ್ಲಿ ಒಂದಾಗಿರುವ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ. ಈ ದೇಶ ಸಾವಿರಾರುಗಟ್ಟಲೆ ಐಲ್ಯಾಂಡ್ಸ್ ಗಳಿಂದ ಪ್ರಸಿದ್ಧಿ ಪಡೆದ ರಾಷ್ಟ್ರವಾಗಿದೆ.
ವಿಯೇಟ್ನಮಿ ಡೋಂಗ್ – ವಿಯೇಟ್ನಮ್
1 ಭಾರತೀಯ ರೂಪಾಯಿ 304 ವಿಯೇಟ್ನಮಿ ಡೊಂಗ್ ಗೆ ಸಮ
ದಕ್ಷಿಣ ಪೂರ್ವ ಏಷ್ಯಾದಲ್ಲಿರುವ ವಿಯೇಟ್ನಮ್ ದೇಶದ ರಾಜಧಾನಿ ಹನೋಯಿ. ಸಮುದ್ರದ ಕಿನಾರೆಗಳು, ನದಿಗಳಿಗಾಗಿ ಈ ದೇಶ ಫೇಮಸ್.
ಇರಾನಿ ರಿಯಲ್ – ಇರಾನ್
1 ಭಾರತೀಯ ರೂಪಾಯಿ 457 ಇರಾನಿ ರಿಯಲ್ ಗೆ ಸಮ
ಇರಾನ್ ದೇಶದ ರಾಜಧಾನಿ ತೆಹರಾನ್. ಇಲ್ಲಿನ ಜನರು ಲೆಕ್ಕಾಚಾರಕ್ಕಾಗೆ ತೋಮನ್ ಶಬ್ಧವನ್ನ ಬಳಸುತ್ತಾರೆ. ಅಂದ್ರೆ 1 ತೋಮನ್ ನ ಬೆಲೆ ಅವರ ಪ್ರಕಾರ 10 ರಿಯಲ್. ಉದಾಹರಣೆಗೆ ಅಂಗಡಿಯಲ್ಲಿ 10 ತೋಮನ್ ಅಂತ ಕೇಳಿದ್ರೆ 100 ರಿಯಲ್ ಕೊಡಬೇಕೆಂದು ಅರ್ಥ.
ವಿಶ್ವದ ಅತ್ಯಂತ ದುರ್ಬಲ ಕರೆನ್ಸಿ
ವೆನೆಜುವೇಲನ್ ಸೊವೆರೀಜನ್ ಬೋಲಿವಾರ್ (VES) – ವೆನೆಜುವಿಲ್ಲಾ
1 ಭಾರತೀಯ ರೂಪಾಯಿ 1570 ವೆನೆಜುವೇಲನ್ ಸೊವೆರೀಜನ್ ಬೋಲಿವಾರ್ ಗೆ ಸಮ
ವೆನೆಜುವೆಲ್ಲಾ ದೇಶ ಪ್ರಾಕೃತಿಕ ಸೌಂದರ್ಯಕ್ಕಾಗಿ ಪ್ರಸಿದ್ಧಿ ಪಡೆದ ರಾಷ್ಟ್ರವೂ ಹೌದು. ಈ ದೇಶ ಇಡೀ ವಿಶ್ವದಲ್ಲಿ ಅತಿ ಹೆಚ್ಚು ತೈರ ರಫ್ತು ಮಾಡುವ ದೇಶಗಳಲ್ಲಿ ಒಂದು. ಅಂದ್ರೆ 20ಸಾವಿರ ಭಾರತೀಯ ರೂಪಾಯಿ ಇದ್ದರೆ ಈ ದೇಶದಲ್ಲಿ 10 ದಿನಗಳು ಆರಾಮಾಗಿ ಪ್ರವಾಸಕ್ಕೆ ಹೋಗಿ ಬರಬಹುದು.