ಪಾಕ್ ಮಾಜಿ ನಾಯಕ ಶಾಹೀದ್ ಆಫ್ರಿದಿಗೆ ಕೋವಿಡ್-19 ಪಾಸಿಟಿವ್
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಆಫ್ರಿದಿ ಅವರು ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಶಾಹೀದ್ ಆಫ್ರಿದಿಯವರೇ ಬಹಿರಂಗಪಡಿಸಿದ್ದಾರೆ. ಟ್ವಿಟರ್ನಲ್ಲಿ ತನಗೆ ಕೋವಿಡ್ ಸೋಂಕು ಪಾಸಿಟಿವ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.
ಕಳೆದ ಗುರುವಾರದಿಂದ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನನ್ನ ದೇಹದಲ್ಲಿ ಕೆಟ್ಟ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ನಾನು ಪರೀಕ್ಷೆಗೆ ಒಳಪಟ್ಟೆ. ಆಗ ನನಗೆ ಕೋವಿಡ್ -19 ಸೋಂಕು ಇರುವುದು ಪತ್ತೆಯಾಯ್ತು. ಬೇಗ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ. ಇನ್ಶಾ ಅಲ್ಲಾ ಅಂತ ಅಫ್ರಿದಿ ಟ್ವಿಟ್ ಮಾಡಿದ್ದಾರೆ.
ಈಗಾಗಲೇ ಪಾಕ್ನ ಇಬ್ಬರು ಪ್ರಥಮ ದರ್ಜೆಯ ಕ್ರಿಕೆಟಿಗರು ಕೊರೋನಾ ವೈರಸ್ಗೆ ಬಲಿಯಾಗಿದ್ದಾರೆ. ಹಾಗೇ ತೌಫಿಕ್ ಉಮ್ಮರ್ ಮತ್ತು ಝಾಓರ್ ಸಫ್ರಾಜ್ ಅವರು ಕೋರೋನಾ ಸೋಂಕಿನಿಂದ ಬಳಲುತ್ತಿದ್ದು ಈಗ ಚೇತರಿಸಿಕೊಂಡಿದ್ದಾರೆ. ಅದೇ ರೀತಿ ಸ್ಕಾಟ್ಲೆಂಡ್ನ ಮಜೀದ್ ಹಕ್ ಮತ್ತು ದ
ಕ್ಷಿಣ ಆಫ್ರಿಕಾದ ಸೊಲೋ ಎನ್ಕ್ವೇನಿ ಕೂಡ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು.
ಶಾಹೀದ್ ಆಫ್ರಿದಿಯವರು ಪಾಕಿಸ್ತಾನದಲ್ಲಿ ಕೊರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದರು. ಶಾಹೀದ್ ಆಫ್ರಿದಿ ಪೌಂಡೇಷನ್ ಮೂಲಕ ಜನ ಸೇವೆ ಮಾಡ್ತಾ ಇದ್ರು. ಅಲ್ಲದೆ ತನ್ನ ಪೌಂಡೇಶನ್ ಸಹಾಯ ಮಾಡುವಂತೆ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಬಳಿ ಮನವಿ ಮಾಡಿಕೊಂಡಿದ್ದರು.
ಈ ನಡುವೆ ಶಾಹೀದ್ ಆಫ್ರಿದಿಯವರು ವಿವಾದಕ್ಕೂ ಗುರಿಯಾಗಿದ್ದರು. ಎಲ್ಒಸಿಗೆ ಪ್ರಧಾನಿ ಭೇಟಿ ನೀಡಿದಾಗ ವಿವಾದಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳನ್ನು ಆಫ್ರಿದಿ ಎದುರಿಸಬೇಕಾಗಿತ್ತು.








