Biplab Deb: ತ್ರಿಪುರಾ ಮಾಜಿ ಮುಖ್ಯಮಂತ್ರಿ ಮನೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು…
ತ್ರಿಪುರಾದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿಪ್ಲಬ್ ದೇವ್ ಅವರ ಮನೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ. ಸಿಪಿಐಎಂ ಬೆಂಬಲಿತ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಪ್ರತಿ ವರ್ಷ ಬಿಪ್ಲಬ್ ದೇಬ್ ಅವರ ತಂದೆ ಹಿರುಧನ್ ದೇಬ್ ಅವರ ಸ್ಮರಣಾರ್ಥ ಪೂರ್ವಜರ ಮನೆಯಲ್ಲಿ ಯಜ್ಞಗಳು ಮತ್ತು ಯಾಗಗಳನ್ನು ನಡೆಸಲಾಗುತ್ತದೆ. ಉದಯಪುರದಲ್ಲಿರುವ ಬಿಪ್ಲಬ್ ದೇವ್ ಅವರ ಮನೆಗೆ ಇದರ ಭಾಗವಾಗಿ ಅರ್ಚಕರು ನಿನ್ನೆ ರಾತ್ರಿ ಮನೆಗೆ ತಲುಪಿದ್ದಾರೆ.
ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಅಪರಿಚಿತರು ವೈದಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿ ಮನಬಂದಂತೆ ಥಳಿಸಿ ಅವರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಪ್ಲಬ್ ದೇವ್ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ. ಪರಿಣಾಮ ಮನೆ ಹಾಗೂ ಇನ್ನೊಂದು ಅಂಗಡಿ ಸುಟ್ಟು ಕರಕಲಾಗಿದೆ.
ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಈ ಘಟನೆಗೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Biplab Deb: Miscreants who attacked former Tripura Chief Minister’s house and set it on fire…








