Jasprit bumrah : ಟಿಂ ಇಂಡಿಯಾಗೆ ಮರಳಿದ ಜಸ್ಪ್ರೀತ್ ಬುಮ್ರಾ….
ಗಾಯಗೊಂಡು ವಿಶ್ವಕಪ್ ಸೇರಿದಂತೆ ಹಲವು ಸರಣಿಗಳಿಂದ ದೂರ ಉಳಿದಿರುವ ಜಸ್ಪ್ರೀತ್ ಬುಮ್ರಾ ಅವರನ್ನ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಆಯ್ಕೆ ಮಾಡಲಾಗಿದ್ದು ಟೀಂ ಇಂಡಿಯಾದ ಸ್ಟಾರ್ ಬೌಲರ್ ಮರಳಿ ತಂಡಕ್ಕೆ ಬಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಮೊದಲು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ODI ಸರಣಿ ಆಯ್ಕೆ ಮಾಡಿ ಲಯವನ್ನ ಮರಳಿ ಪಡೆಯಲು ಸಮಯ ನೀಡಿದ್ದಾರೆ.
ಬೆನ್ನಿನ ಗಾಯದಿಂದಾಗಿ ಕಳೆದ ವರ್ಷದ ಸೆಪ್ಟಂಬರ್ ನಿಂದ ಬೂಮ್ರ ತಂಡದಿಂದ ಹೊರಗುಳಿದಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿಗೆ ಒಳಗಾಗಿದ್ದರು. ನವೆಂಬರ್‌ನಿಂದ ಬುಮ್ರಾ ಎನ್‌ಸಿಎಯಲ್ಲಿ ಬೌಲಿಂಗ್ ಪುನರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬರುವ IPL ನಂತರ ಜೂನ್ ನಲ್ಲಿ ಬರಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪೈನಲ್ ಗೆ ಅರ್ಹತೆ ಪಡೆಯುವ ಸಂದರ್ಭದಲ್ಲಿ ಬುಮ್ರಾ ಅವರ ಲಭ್ಯತೆ ನಿರ್ಣಾಯಕವಾಗಿದೆ.
Jasprit Bumrah: Jasprit Bumrah returned to Team India….








