Siddaramaih : ಜನ ಈಗಾಗಲೇ ಕಾಂಗ್ರೆಸ್ ಪರ ಮತ ಹಾಕಲು ತೀರ್ಮಾನಿಸಿದ್ದಾರೆ – ಸಿದ್ದರಾಮಯ್ಯ
ತುಮಕೂರು : ನಾಳೆ ತುಮಕೂರಿಗೆ ಜೆಪಿ ನಡ್ಡಾ ಭೇಟಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ( ವಿಪಕ್ಷ ನಾಯಕ ) ಅವರು ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ..
ತುರುವೇಕೆರೆಯಲ್ಲಿ ಮಾತನಾಡಿರುವ ಅವರು ಅವರು ಬರಬಾರದು ಅಂತ ನಾವ್ಯಾಕೆ ಹೇಳಬೇಕು.. ಅವರ ಪಕ್ಷದ ಕೆಲಸ ಅವರು ಮಾಡಿಕೊಂಡು ಹೊಗ್ತಾರೆ.. ಅಂತಿಮವಾಗಿ ಜನ ತೀರ್ಮಾನ ಮಾಡ್ತಾರೆ..
ಯಾರೇ ಬಂದರೂ ಸರ್ಕಾರದ ಮೇಲೆ ಇರೋ ವಿರೋಧದ ಅಲೆ ಕಡಿಮೆ ಮಾಡೋಕೆ ಆಗಲ್ಲಾ.. ನಡ್ಡಾ, ಪ್ರಧಾನಿ ನರೇಂದ್ರ ಮೋದಿ , ಕಾಂಟ್ ಚೇಂಜ್ ಇಟ್..
ಜನ ಈಗಾಗಲೇ ಕಾಂಗ್ರೆಸ್ ಪರವಾಗಿ ಮತ ಹಾಕಲು ತೀರ್ಮಾನ ಮಾಡಿ ಆಗಿದೆ.. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಬದಲಾವಣೆಯ ಗಾಳಿ ಬೀಸ್ತಿದೆ.. ಕಾಂಗ್ರೆಸ್ ಸರ್ಕಾರದ 5 ವರ್ಷದ ಆಡಳಿತವನ್ನು ಜನರು ನೆನಪು ಮಾಡ್ತಿದ್ದಾರೆ..
ಬಿಜೆಪಿ ಅವರು ಬರೀ ಸುಳ್ಳು ಹೇಳಿಕೊಂಡ ಓಡಾಡ್ತಿದ್ದಾರೆ.. ಹಳೆ ಮೈಸೂರು ಪ್ರಾಂತ್ಯವನ್ನ ಟಾರ್ಗೆಟ್ ಮಾಡಿರುವ ಬಿಜೆಪಿ ಅವರು.. ಉತ್ತರ ಕರ್ನಾಟಕದ ಎಲ್ಲಾ ಕ್ಷೇತ್ರವನ್ನ ಗೆದ್ದಾಯ್ತ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ..
ಹಳೆ ಮೈಸೂರು ಪ್ರಾಂತ್ಯದ ಜನ ಬಿಜೆಪಿ ಮಾತಿಗೆ ಮಣೆ ಹಾಕಲ್ಲಾ.. ಬಿಜೆಪಿ ಅವರು ಸುಳ್ಳು ಹೇಳ್ತಾರೆ ಅಂತಾ ಗೊತ್ತಾಗಿದೆ ಜನಕ್ಕೆ.. ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಅಂತಾ ಜನಕ್ಕೆ ಗೊತ್ತಾಗಿದೆ. 2018 ರಲ್ಲಿ ಬಿಜೆಪಿ ಅವರು 600 ಭರವಸೆಗಳನ್ನ ಕೊಟ್ಟಿದ್ರು..
ಅದರಲ್ಲಿ 10% ನಷ್ಟು ಕೆಲಸ ಮಾಡಿಲ್ಲಾ.. ನೀರಾವರಿಗಾಗಿ 150 ಲಕ್ಷ ಕೋಟಿ ಖರ್ಚು ಮಾಡ್ತೀವಿ ಅಂತಾ ಹೇಳಿದ್ರು.. 45 ಲಕ್ಷ ಕೋಟಿನೂ ಖರ್ಚು ಮಾಡಿಲ್ಲಾ,ಅವರು ಹೇಳಿರೋ ಒಂದು ನಡೆದುಕೊಂಡಿಲ್ಲಾ.. ತುಮಕೂರು ಜಿಲ್ಲೆಯಲ್ಲಿ 8 ರಿಂದ 9 ಸ್ಥಾನವನ್ನ ಗೆಲ್ತೀವಿ.. 11 ಜನರು ಗೆದ್ದರೂ ಕೂಡ ಆಶ್ಚರ್ಯ ಇಲ್ಲಾ ಎಂದಿದ್ದಾರೆ..








