Ranaji ಮಯಾಂಕ್ ಶತಕ ಛತ್ತೀಸ್ಗಢಕ್ಕೆ ಕರ್ನಾಟಕ ತಿರುಗೇಟು
ನಾಯಕ ಮಯಾಂಕ್ ಅಗರ್ವಾಲ್ ಅವರ ಶತಕ ಹಾಗೂ ವಿಶ್ವತ್ ಕಾವೇರಪ್ಪ ಮಾರಕ ದಾಳಿಯ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ಛತ್ತೀಸ್ಗಢ ತಂಡಕ್ಕೆ ತಿರುಗೇಟು ನೀಡಿದೆ.
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಎರಡನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಛತ್ತೀಸ್ಗಢ ಮೊದಲ ಇನ್ನಿಂಗ್ಸ್ನಲ್ಲಿ 311 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 1 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿದೆ. 109ರನ್ ಗಳ ಹಿನ್ನಡೆ ಅನುಭವಿಸಿದೆ.
ದಿನದಾಟದ ಆರಂಭದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಛತ್ತೀಸ್ಗಢ ಆಶುತೋಷ್ 135, ಶಶಾಂಕ್ ಸಿಂಗ್ 13, ಮಯಾಂಕ್ ವರ್ಮಾ ಅಜೇಯ 15 ರನ್ಗಳಿಸಿ ಪೆವಿಲಿಯನ್ ಸೇರಿದರು.
ಕರ್ನಾಟಕ ಪರ ವಿದ್ವತ್ ಕಾವೇರಪ್ಪ 67ಕ್ಕೆ 5, ವಾಸೂಕಿ ಕೌಶಿಕ್ 43ಕ್ಕೆ 4, ವಿಜಯ್ ಕುಮಾರ್ ವೈಶಾಕ್ 56ಕ್ಕೆ 1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಆರ್. ಸಮರ್ಥ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ಗೆ 163 ರನ್ ಸೇರಿಸಿ ಭರ್ಜರಿ ಆರಂಭ ನೀಡಿದರು.
11 ಬೌಂಡರಿ ಹೊಡೆದ ಆರ್.ಸಮರ್ಥ್ 81 ರನ್ ಗಳಿಸಿ ಮಂಡಲ್ಗೆ ಕಾಟ್ ಅಂಡ್ ಬೌಲ್ಡ್ ಆದರು. ಮಯಾಂಕ್ ಅಗರ್ವಾಲ್ 9 ಬೌಂಡರಿ 5 ಸಿಕ್ಸರ್ ನೆರೆವಿನಿಂದ ಅಜೇಯ 102 ರನ್ ಗಳಿಸಿದರು. ವಿಶಾಲ್ ಒನತ್ ಅಜೇಯ 15 ರನ್ ಗಳಿಸಿ ಮೂರನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.








