ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್
ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್. ಆದ್ರೂ ಅವರ ಜೊತೆ ನಾವು ಸುಲಭವಾಗಿ ಮಾತನಾಡಬಹುದು ಎಂದು ವೆಸ್ಟ್ ಇಂಡೀಸ್ನ ಆಲ್ರೌಂಡರ್ ಡ್ವೇನ್ ಬ್ರಾವೋ ಬಣ್ಣಿಸಿದ್ದಾರೆ.
ಜಿಂಬಾಬ್ವೆ ವೇಗಿ ಪೋಮೀಯ್ ಎಂಬಾಂಗ್ವಾ ಜೊತೆಗಿನ ಇನ್ಸ್ಟಾಗ್ರಾಮ್ ಲೈವ್ ಕಾರ್ಯಕ್ರಮದಲ್ಲಿ ಡ್ವೇನ್ ಬ್ರಾವೋ ಅವರು ಧೋನಿ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡ್ರು.
ಡ್ವೇನ್ ಬ್ರಾವೋ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದರು. ಸಿಎಸ್ಕೆ ತಂಡದ ಯಶಸ್ವಿಗೆ
ಎಮ್.ಎಸ್. ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರ ಕೊಡುಗೆ ಅಪಾರವಾದದ್ದು. ಹಾಗೇ ತಂಡದ ಮಾಲೀಕರದ್ದೂ ಇದೆ. ಆದ್ರೆ ತಂಡದ ಮಾಲೀಕರು ಧೋನಿ ಮತ್ತು ಫ್ಲೇಮಿಂಗ್ ಮೇಲೆ ಅಪಾರವಾದ ವಿಶ್ವಾಸವನ್ನಿಟ್ಟುಕೊಂಡಿದ್ದರು. ಅಲ್ಲಿ ಹೊರಗಿನವರು ಯಾರು ಕೂಡ ಭಾಗಿಯಾಗಿರುತ್ತಿರಲಿಲ್ಲ. ಏನೇ ನಿರ್ಧಾರವಿದ್ರೂ ಅದು ಧೋನಿ ಮತ್ತು ಫ್ಲೇಮಿಂಗ್ ಅವರದ್ದಾಗಿರುತ್ತಿತ್ತು. ಅವರಿಬ್ಬರು ಕ್ರಿಕೆಟ್ ಆಟದ ವಿದ್ಯಾರ್ಥಿಯಾಗಿದ್ದರು. ಆಟಗಾರರು ಕೂಡ ಎಂಎಸ್ಡಿಯನ್ನು ತುಂಬಾನೇ ಪ್ರೀತಿಸುತ್ತಿದ್ದರು. ಅಲ್ಲದೆ ಅಲ್ಲಿ ಅಂತಹ ವಾತಾವರಣವೂ ಇತ್ತು ಅಂತಾರೆ ಡ್ವೇನ್ ಬ್ರಾವೋ.
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಆಟದ ಸೂಪರ್ ಸ್ಟಾರ್. ಹಾಗೇ ತಮ್ಮ ತಂಡದ ಕೂಡ. ಅವರನ್ನು ನಾವು ಸುಲಭವಾಗಿ ಮಾತನಾಡಿಸಬಹುದಿತ್ತು. ಅವರು ಯಾವಾಗಲೂ ವಿಡಿಯೋ ಗೇಮ್ ಆಡ್ತಾ ಇರುತ್ತಿದ್ರು. ಅವರು ಎಲ್ಲರ ಜೊತೆ ಮುಕ್ತವಾಗಿ ಮಾತನಾಡಲು ಸಿಗುತ್ತಿದ್ದರು. ಅವರು ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಅವರಲ್ಲಿ ನಾವು
ವಿನಮ್ರತೆಯನ್ನು ಕಾಣಬಹುದು. ಸಿಎಸ್ಕೆ ಒಂದು ವಿಶೇಷ ತಂಡ. ಅದಕ್ಕಾಗಿಯೇ ಸಿಎಸ್ಕೆ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ ಎಂದು ಬ್ರಾವೋ ಹೇಳ್ತಾರೆ.
2011ರಿಂದ ಬ್ರಾವೋ ಅವರು ಸಿಎಸ್ಕೆ ತಂಡದ ಪರ ಆಡುತ್ತಿದ್ದಾರೆ. ಒಟ್ಟು 104 ಪಂದ್ಯಗಳನ್ನು ಆಡಿದ್ದು 104 ವಿಕೆಟ್ಗಳನ್ನು ಉರುಳಿಸಿದ್ದಾರೆ. 2013 ಮತ್ತು 2015ರಲ್ಲಿ ಬ್ರಾವೋ ಅವರು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು. ಇನ್ನು ಸಿಎಸ್ಕೆ ಮೂರು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮೂರು ಬಾರಿಯೂ ಧೋನಿಯೇ ನಾಯಕತ್ವ ವಹಿಸಿದ್ದರು. ಹಾಗೇ ನೋಡಿದ್ರೆ ಸಿಎಸ್ಕೆ ತಂಡಕ್ಕೆ ಧೋನಿಯೇ ನಾಯಕರು. 2010, 2011 ಮತ್ತು 2018ರಲ್ಲಿ ಸಿಎಸ್ಕೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು.








