ಮಗು ಎತ್ತೊಯ್ದು ಟೆರಸ್ ನಿಂದ ಬಿಸಾಡಿದ ಕೋತಿ : 2 ತಿಂಗಳ ಹಸುಗೂಸು ಸಾವು…
ಮನೆಯ ಅಂಗಳದಲ್ಲಿ ಮಲಗಿದ್ದ ಮಗುವನ್ನ ಕೋತಿಗಳ ಗುಂಪೊಂದು ಎತ್ತಿಕೊಂಡು ಹೋಗಿ ಟೆರೆಸ್ ನಿಂದ ಎಸೆದ ಘಟನೆ ಉತ್ತರಪ್ರದೇಶದ ಬಂದಾ ಎಂಬ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಬಿದ್ದ ರಭಸಕ್ಕೆ ಬಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಗು ಕಳೆದುಕೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರಲ್ಲಿ ಶೋಕ ಮಡುಗಟ್ಟಿದೆ. ಮಗುವಿನ ಕುಟುಂಬದ ಸದಸ್ಯರು ಮರಣೋತ್ತರ ಪರೀಕ್ಷೆ ನಡೆಸದೆ ಮಗುವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ.
ತಿಂದವಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಛಪಾರ್ ನಲ್ಲಿ ಈ ಘಟನೆ ನಡೆದಿದೆ. ಮಗಳವಾರ ತಡರಾತ್ರಿ ವಿಶ್ವೇಶ್ವರ್ ವರ್ಮಾ ಎಂಬುವವರ ಪುತ್ರ ಮನೆಯ ಅಂಗಳದಲ್ಲಿ ಮಲಗಿದ್ದ ತಾಯಿ ಮಗುವನ್ನ ಮಲಗಿಸಿ ಮನೆ ಕೆಲಸಗಳನ್ನ ನಿರ್ವಹಿಸುತ್ತಿದ್ದಳು. ಅಷ್ಟರಲ್ಲಿ ಕೋತಿಯೊಂದು ಇದ್ದಕಿದ್ದಂತೆ ಬಂದು ಮಗುವನ್ನು ಎತ್ತಿಕೊಂಡು ಏಣಿಯ ಸಹಾಯದಿಂದ ಟೆರೆಸ್ ಗೆ ಎತ್ತಿಕೊಂಡು ಹೋಗಿದೆ.
ಮಗುವಿನ ಚೀರಾಟ ಕೇಳಿ ಮನೆಯವರು ಧಾವಿಸಿ ಬಂದು ಕೂಗಾಡಿದ್ದಾರೆ. ಈ ವೇಳೆ ಕೋತಿ ಮಗುವನ್ನ ಮಾಳಿಗೆಯಿಂದ ಕೆಳಗೆ ಎಸೆದಿದೆ ತಕ್ಷಣ ಮನೆಯವರು ವೈದ್ಯರ ಬಳಿ ದಾವಿಸಿ ಮಗು ತೋರಿಸಿದ್ದಾರೆ. ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.
ಇದಾದ ಬಳಿಕ ಕುಟುಂಬದವರು ಮರಣೋತ್ತರ ಪರೀಕ್ಷೆ ನಡೆಸದೇ ಮಗುವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ. ಇದೇ ವೇಳೆ ಮಂಗಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ದೂರು ನೀಡುವುದಾಗಿ ಗ್ರಾಮದ ಮುಖಂಡರು ಸೇರಿದಂತೆ ಗ್ರಾಮಸ್ಥರು ತಿಳಿಸಿದ್ದಾರೆ.
Uttar Pradesh: Monkey picked up a child and threw it from the terrace: 2 months old cow died…








