Asia Championship : ಭಾರತ ತಂಡ ಮುನ್ನಡೆಸಲಿದ್ದಾರೆ ಸಿಂಧು, ಕಶ್ಯಪ್
ಮುಂಬರುವ ಪ್ರತಿಷ್ಠಿತ ಏಷ್ಯಾ ಮಿಶ್ರ ತಂಡದ ಚಾಂಪಿಯನ್ಶಿಪ್ನಲ್ಲಿ ಪಿ.ವಿ.ಸಿಂಧು ಮತ್ತು ಎಚ್.ಪ್ರಣಯ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಮುಂದಿನ ತಿಂಗಳು ಫೆ.14ರಿಂದ ಫೆ.19ರವರೆಗೆ ದುಬೈನಲ್ಲಿ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್ ನಡೆಯಲಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಅಗ್ರ ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿದೆ. ಉಳಿದ ಆಟಗಾರರನ್ನು ಟ್ರಯಲ್ಸ್ ಮೂಲಕ ಆಯ್ಕೆ ಮಾಡಿದೆ. ಬ್ಯಾಡ್ಮಿಂಟನ್ ಆಸೋಸಿಯೇಷನ್ ಈ ಹಿಂದನಂತೆ ಆಟಗಾರರ ಆಯ್ಕೆಯನ್ನು ಮಾಡಿದೆ.
ಈ ರೀತಿಯ ಆಯ್ಕೆ ಪ್ರಕ್ರಿಯೆಯಿಂದ ಬಲಿಷ್ಠ ತಂಡಗಳಿಗೆ ಕಠಿಣ ಸವಾಲು ನೀಡಬಹುದೆಂಬುದು ಬಿಎಐ ಲೆಕ್ಕಾಚಾರವಾಗಿದೆ. ಕಳೆದ ವರ್ಷ ಈ ಚಾಂಪಿಯನ್ಶಿಪ್ ಕೋವಿಡ್ನಿಂದಾಗಿ ರದ್ದಾಗಿತ್ತು. ಯುವ ಆಟಗಾರ ಪುರುಷ ವಿಭಾಗದ ಸಿಂಗಲ್ಸ್ ಆಡುವ ಮತ್ತೊಂದು ಆಯ್ಕೆಯಾಗಿದೆ. ಆಕಾರ್ಷಿ ಕಶ್ಯಪ್ ಸಿಂಗಲ್ಸ್ ವಿಭಾಗದಲ್ಲಿ ಆಡುವ ಬ್ಯಾಕ್ ಅಪ್ ಆಟಗಾರ್ತಿಯಾಗಿದ್ದಾರೆ.
ಮಹಿಳಾ ಡಬಲ್ಸ್ ನಲ್ಲಿ ಟ್ರೆಸ್ಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಆಡಲಿದ್ದಾರೆ. ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಕಣಕ್ಕಿಳಿಯಲಿದೆ.








