ADVERTISEMENT
Monday, April 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IND vs SL 2nd T20 : ಅಕ್ಸರ್‌ – ಸೂರ್ಯ ವ್ಯರ್ಥ ಹೋರಾಟ..!!

Namratha Rao by Namratha Rao
January 6, 2023
in Newsbeat, News, ಕ್ರೀಡೆ
axar patel
Share on FacebookShare on TwitterShare on WhatsappShare on Telegram

IND vs SL 2nd T20 : ಅಕ್ಸರ್‌ – ಸೂರ್ಯ ವ್ಯರ್ಥ ಹೋರಾಟ..!!

ಅಕ್ಸರ್‌ ಪಟೇಲ್‌ (65) ಹಾಗೂ ಸೂರ್ಯಕುಮಾರ್‌ ಯಾದವ್‌ (51) ಅದ್ಭುತ ಬ್ಯಾಟಿಂಗ್‌ಹಾಗೂ ಶಿವಂ ಮಾವಿ(26) ಅವರ ಜವಾಬ್ದಾರಿಯುತ ಆಟದ ನಡುವೆಯೂ ಶ್ರೀಲಂಕಾ ವಿರುದ್ಧದ ಎರಡನೇ T20I ಪಂದ್ಯದಲ್ಲಿ ಭಾರತ 16  ಗಳ ರನ್ ಗಳ ಸೋಲಿನ ನಿರಾಸೆ ಅನುಭವಿಸಿತು.

Related posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

April 6, 2026
ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

April 6, 2026

ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 206 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಈ ಟಾರ್ಗೆಟ್‌ ಚೇಸ್‌ ಮಾಡಿದ ಟೀಂ ಇಂಡಿಯಾ ಕೊನೆಯ ಓವರ್‌ವರೆಗೂ ಹೋರಾಟ ನಡೆಸಿದರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 190 ರನ್‌ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಉತ್ತಮ ಕಮ್‌ಬ್ಯಾಕ್‌ ಮಾಡಿದ ಶ್ರೀಲಂಕಾ 1-1ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

ಶನಕ-ಮೆಂಡಿಸ್‌ ಭರ್ಜರಿ ಆಟ:

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಪತುಮ್‌ ನಿಸ್ಸಂಕ(33) ರನ್‌ಗಳ ಉತ್ತಮ ಕಾಣಿಕೆ ನೀಡಿದರೆ. ಕುಸಲ್‌ ಮೆಂಡಿಸ್‌ 31 ಬಾಲ್‌ಗಳಲ್ಲಿ 4 ಸಿಕ್ಸ್‌ ಮತ್ತು 3 ಬೌಂಡರಿ ನೆರವಿನಿಂದ 52 ರನ್‌ಗಳಿಸಿ ಮಿಂಚಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ಅಸಲಂಕ(37) ಬಿರುಸಿನ ಆಟವಾಡಿ ವಿಕೆಟ್‌ ಒಪ್ಪಿಸಿದರು. ಆದರೆ ನಂತರ ಬಂದ ದಸುನ್‌ ಶನಕ ಸ್ಪೋಟಕ ಆಟದ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನ ಧೂಳಿಪಟ ಮಾಡಿದರು. 6ನೇ ಕ್ರಮಾಂಕದಲ್ಲಿ ಬಂದ ಶನಕ, ಕೇವಲ 22 ಬಾಲ್‌ಗಳಲ್ಲಿ 6 ಸಿಕ್ಸರ್‌ ಹಾಗೂ 2 ಬೌಂಡರಿ ಮೂಲಕ ಅಜೇಯ 56 ರನ್‌ಗಳಿಸಿ ಅಬ್ಬರಿಸಿದರು. ಅಂತಿಮವಾಗಿ ಶ್ರೀಲಂಕಾ 6 ವಿಕೆಟ್‌ಗೆ 206 ರನ್‌ಗಳ ಅತ್ಯುತ್ತಮ ಮೊತ್ತ ಕಲೆಹಾಕಿದರು. ಭಾರತದ ಪರ ಉಮ್ರಾನ್‌ ಮಲ್ಲಿಕ್‌ 3, ಅಕ್ಸರ್‌ ಪಟೇಲ್‌ 2 ಹಾಗೂ ಚಹಲ್‌ 1 ವಿಕೆಟ್‌ ಪಡೆದರು.

ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ:

ಶ್ರೀಲಂಕಾ ನೀಡಿದ 207 ರನ್‌ಗಳ ಕಠಿಣ ಟಾರ್ಗೆಟ್‌ ಚೇಸ್‌ ಮಾಡಿದ ಭಾರತ ಆರಂಭಿಕ ಆಘಾತ ಕಂಡಿತು. ಓಪನರ್‌ಗಳಾದ ಕಿಶನ್‌(2) ಹಾಗೂ ಗಿಲ್‌(5) ರನ್‌ಗಳಿಗೆ ಪೆವಿಲಿಯನ್‌ ಸೇರಿದರೆ. ಸಂಜೂ ಸ್ಯಾಮ್ಸನ್‌ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ರಾಹುಲ್‌ ತ್ರಿಪಾತಿ(5) ನಿರಾಸೆ ಮೂಡಿಸಿದರು. ಇವರ ಬೆನ್ನಲ್ಲೇ ನಾಯಕ ಹಾರ್ದಿಕ್‌ ಪಾಂಡ್ಯ(12) ಹಾಗೂ ಮೊದಲ ಪಂದ್ಯದಲ್ಲಿ ಮಿಂಚಿದ್ದ ದೀಪಕ್‌ ಹೂಡ(9) ಸಹ ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿದರು. ಪರಿಣಾಮ ಭಾರತ 57 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಅಕ್ಸರ್‌-ಸೂರ್ಯ ವ್ಯರ್ಥ ಹೋರಾಟ:

ಆದರೆ 6ನೇ ವಿಕೆಟ್‌ಗೆ ಜೊತೆಯಾದ ಸೂರ್ಯಕುಮಾರ್‌ ಹಾಗೂ ಅಕ್ಸರ್‌ ಪಟೇಲ್‌ ಭರ್ಜರಿ ಬ್ಯಾಟಿಂಗ್‌ನಿಂದ ಗೆಲುವಿನ ಆಸೆ ಜೀವಂತ ಇರಿಸಿದರು. ಶ್ರೀಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ 91 ರನ್‌ಗಳ ಅತ್ಯುತ್ತಮ ಜೊತೆಯಾಟವಾಡಿದರು. ಆದರೆ ನಿರ್ಣಾಯಕ ಹಂತದಲ್ಲಿ ಸೂರ್ಯಕುಮಾರ್‌(51) ಅರ್ಧಶತಕ ಸಿಡಿಸಿ ವಿಕೆಟ್‌ ಒಪ್ಪಿಸಿದರೆ. ಅಕ್ಸರ್‌ ಪಟೇಲ್‌(65) ಹೋರಾಟ ಅಂತ್ಯಗೊಂಡಿತು. 8ನೇ ಕ್ರಮಾಂಕದಲ್ಲಿ ಬಂದ ಶಿವಂ ಮಾವಿ(26) ಸಹ ಜವಾಬ್ದಾರಿಯ ಆಟವಾಡಿದರು ತಂಡಕ್ಕೆ ಗೆಲುವು ಸಿಗಲಿಲ್ಲ. ಅಂತಿಮವಾಗಿ ಭಾರತ 190/8 ರನ್‌ಗಳಿಸಲಷ್ಟೇ ಶಕ್ತವಾಯಿತು. ಶ್ರೀಲಂಕಾ ಪರ ಮಧುಶಂಕ, ರಜಿತ ಹಾಗೂ ಶನಕ ತಲಾ 2 ವಿಕೆಟ್‌ ಪಡೆದರೆ. ಕರುಣಾರತ್ನೆ ಮತ್ತು ಹಸರಂಗ 1 ವಿಕೆಟ್‌ ಪಡೆದರು.

ಗೆಲ್ಲಲೇಬೇಕಿದ್ದ ಪಂದ್ಯದಲಿ ಆಲ್ರೌಂಡ್‌ ಪ್ರದರ್ಶನ ನೀಡಿದ ಶ್ರೀಲಂಕಾದ ನಾಯಕ ದಸುನ್‌ ಶನಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ ಟಿ20 ಸರಣಿಯ ಅಂತಿಮ ಹಾಗೂ ಸರಣಿಯ ನಿರ್ಣಾಯಕ ಪಂದ್ಯ ಜ.7ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.

Tags: #saakshatvAksar PatelIND vs SL 2nd T20
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

by Shwetha
April 6, 2026
0

ರಾಜ್ಯದ ಅನ್ನದಾತರಿಗೆ ಮುಂಗಾರು ಹಂಗಾಮಿನ ಸಮಯದಲ್ಲಿ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ...

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

by Shwetha
April 6, 2026
0

ಬಾಗಲಕೋಟೆ: ರಾಜ್ಯ ಸರ್ಕಾರದ ಖಜಾನೆಯಲ್ಲಿ ಬಿಡಿಗಾಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲವನ್ನೂ ಕಳೆದುಕೊಂಡು ಕೇವಲ ಗರಿಗರಿ ಬಟ್ಟೆ ಹಾಕಿಕೊಂಡು ತಿರುಗುವ ಜಂಭದ ಸಾಹುಕಾರನಂತಾಗಿದೆ. ಮನೆಗೆ ಸಾಲಗಾರರು ಮುತ್ತಿಗೆ...

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

by Shwetha
April 6, 2026
0

ಅಸ್ಸಾಂ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಅಸ್ಸಾಂನ ಗೋಲಾಘಾಟ್...

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

by Shwetha
April 6, 2026
0

ಗಡಿಯಾಚೆಗಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದ್ದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾರತದ ವಿರುದ್ಧ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ. ಭಾರತವೇನಾದರೂ ಪಾಕಿಸ್ತಾನದ ಮೇಲೆ ವಿನಾಕಾರಣ ದಾಳಿ...

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

by Shwetha
April 6, 2026
0

ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಗೂಬೆ ಕೂರಿಸುವ ಬದಲು ಎಲ್ ಪಿ ಜಿ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ 6ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram