Dr. Dodarangegowda : ಭವ್ಯ ರಥದ ಮೂಲಕ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ…..
ಇಂದಿನಿಂದ ಮೂರು ದಿನಗಳ ಕಾಲ ಏಲಕ್ಕಿ ನಗರಿ ಹಾವೇರಿಯಲ್ಲಿ ನಡೆಯಲಿರುವ 86 ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಗಿದೆ. ೮೬ ನೇ ಅಖಿಲ ಭಾರತ ಕ.ಸಾ.ಸಮ್ಮೇಳನ ಹಿನ್ನೆಲೆಯಲ್ಲಿ ಭವ್ಯ ರಥದ ಮೂಲಕ ಸಮ್ಮೇಳನಾದಕ್ಷರ ಡಾ. ದೊಡ್ಡರಂಗೇಗೌಡರನ್ನ ಮೆರವಣಿಗೆ ಮಾಡಲಾಯಿತು.
ಇಂದು ಬೆಳಿಗ್ಗೆ 7.30 ಕ್ಕೆ ಹಾವೇರಿ ಪ್ರಸಿದ್ದ ಹುಕ್ಕೇರಿ ಮಠದಿಂದ ಮೆರವಣಿಗೆ ಪ್ರಾರಂಭವಾಯಿತು. ಇದುವರೆಗೂ ಸಮ್ಮೇಳನದಲ್ಲಿ ಎತ್ತಿನಗಾಡಿ, ಸಾರೋಟುಗಳನ್ನ ಮೆರವಣಿಗೆಗೆ ಬಳಸಲಾಗಿತ್ತು. ಇದೇ ಮೊದಲ ಬಾರಿಗೆ ಭವ್ಯರಥ ನಿರ್ಮಾಣ ಮಾಡಿ ಮೆರವಣಿಗೆ ಮಾಡಲಾಯಿತು.
ಸಮ್ಮೇಳನಾದ್ಯಕ್ಷರಿಗೆ ಮೊದಲ ಬಾರಿಗೆ ಅರಮನೆಯ ದರ್ಬಾರ್ ಮಾದರಿಯಲ್ಲಿ ಮೆರವಣಿಗೆ ಮಾಡಲಾಯಿತು ಸಾವಿರಾರೂ ಕನ್ನಡಾಭಿಮಾನಿಗಳಿಗೆ ಸ್ಪಷ್ಟವಾಗಿ ಕಾಣುವಂತೆ ಎತ್ತರದಲ್ಲಿ ಸಿಂಹಾಸನಸ ವಿನ್ಯಾಸ ಮಾಡಲಾಗಿದ್ದು, ಸಿಂಹಾಸನದ ಮೇಲೆ ಹಳದಿ ಬಣ್ಣದ ಛತ್ರಿ ಅಳವಡಿಕ್ಕೆಯಿಂದ ರಥಕ್ಕೆ ಮತ್ತಷ್ಟು ಮೆರುಗು.
Dr. Dodarangegowda: Sahitya Sammelna President’s Procession by Grand Chariot….








