Gun Shoot : ಶಿಕ್ಷಕಿ ಮೇಲೆ ಗುಂಡು ಹಾರಿಸಿದ ಆರು ವರ್ಷದ ಬಾಲಕ; ಶಿಕ್ಷಕಿ ಗಂಭೀರ…
ಗನ್ ಸಂಸ್ಕೃತಿಗೆ ಕೇರಾಫ್ ಅಡ್ರೆಸ್ ಆಗಿರುವ ಅಮೆರಿಕದ ಶಾಲೆಯೊಂದರಲ್ಲಿ ಮತ್ತೊಮ್ಮೆ ಶೂಟೌಟ್ ಪ್ರಕರಣ ನಡೆದಿದೆ. ಶಾಲೆಯಲ್ಲಿ ಶಿಕ್ಷಕಿ ಮೇಲೆ ಆರು ವರ್ಷದ ಬಾಲಕ ಗುಂಡು ಹಾರಿಸಿರುವ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಶಿಕ್ಷಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಮಕ್ಕಳು ಶಾಲೆಗಳಿಗೆ ಪುಸ್ತಕಗಳ ಜೊತೆ ಊಟದ ಬಾಕ್ಸ್ ಒಯ್ಯುತ್ತಾರೆ ಆದರೆ ಅಮೆರಿಕಾದಲ್ಲಿ ಬಂದೂಕ್ ಗಳನ್ನ ಒಯ್ಯಲಾಗುತ್ತದೆ.
ಶುಕ್ರವಾರ (ಜನವರಿ 6, 2023) ವರ್ಜೀನಿಯಾದ ರಿಚ್ನೆಕ್ ಎಲಿಮೆಂಟರಿ ಶಾಲೆಯಲ್ಲಿ ಆರು ವರ್ಷದ ವಿದ್ಯಾರ್ಥಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ ನಂತರ ಶಿಕ್ಷಕಿಯೊಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ತರಗತಿಯಲ್ಲಿದ್ದ ಉಳಿದ ವಿದ್ಯಾರ್ಥಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ. ಆರು ವರ್ಷದ ಬಾಲಕ ಬಂದೂಕಿನಿಂದ ಗುಂಡು ಹಾರಿಸಿದ ಘಟನೆ ಆಘಾತ ತಂದಿದೆ ಎಂದು ಶಾಲಾ ಅಧೀಕ್ಷಕ ಜಾರ್ಜ್ ಪಾರ್ಕರ್ ಹೇಳಿದ್ದಾರೆ.
ಗುಂಡು ಹಾರಿಸಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಘಟನೆ ಆಕಸ್ಮಿಕವಲ್ಲ ಎಂದು ತೀರ್ಮಾನಿಸಲಾಗಿದೆ. ಬಾಲಕನ ಕೈಗೆ ಬಂದೂಕು ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಹದಿಹರೆಯದ ಮಕ್ಕಳ ಕೈಗೆ ಬಂದೂಕುಗಳನ್ನ ದೂರವಿಡುವಂತೆ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.
Gun Shoot : Six-year-old boy who shot at the teacher; The teacher is serious…








