Chikkaballapura Utsava : ಒಂದೇ ವೇದಿಯಲ್ಲಿ ಕಾಣಿಸಿಕೊಡ CM – ಕಿಚ್ಚ ಸುದೀಪ್…
ಚಿಕ್ಕಬಳ್ಳಾಪುರ ಜಿಲ್ಲೆಗೆ 15 ವರ್ಷ ತುಂಬಿದ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಉತ್ಸವವನ್ನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಉತ್ಸವಕ್ಕೆ ಪರಮಪೂಜ್ಯ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಸ್ವಾಮೀಜಿಗಳ ಅಮೃತ ಹಸ್ತದಿಂದ ಇಂದು ವಿಧ್ಯುಕ್ತ ಚಾಲನೆ ದೊರೆಯಲಿದೆ.
ಸಂಜೆ ನಡೆದ ಸಮಾರಂಭದಲ್ಲಿ ಸಿ ಎಂ ಬೊಮ್ಮಾಯಿ ಸೇರಿದಂತೆ ಹಲವು ಕಿಚ್ಚಾ ಸುದೀಪ್ ಆಗಮಿಸಿ ತಾರಾ ಮೆರುಗು ನೀಡಿದರು. ಸುದೀಪ್ ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ, ನೆರೆದಿದ್ದ ಸಭಿಕರು, ಅಭಿಮಾನಿಗಳು ಕಿಚ್ಚ ಕಿಚ್ಚ ಎಂಬ ಘೋಷಣೆ ಕೂಗಿದರು. ವೇದಿಕೆ ಮೇಲೆ ಆಗಮಿಸಿ ಮೊದಲಿಗೆ ಸಿಎಂ ಬೊಮ್ಮಾಯಿ ಅವರನ್ನು ಅಪ್ಪಿಕೊಂಡು, ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು.
ಉತ್ಸವದ ಭಾಗವಾದ ಫಲಪುಷ್ಪ ಪ್ರದರ್ಶನಕ್ಕೂ ಇಂದು ಚಾಲನೆ ದೊರೆಯಿತು. ಪ್ರದರ್ಶನದಲ್ಲಿ ‘ಮಾದರಿ ಗ್ರಾಮ’ ಸೇರಿದಂತೆ ಅನೇಕ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಚಿಕ್ಕಬಳ್ಳಾಪುರ ಉತ್ಸವಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದ್ದು, ಜನವರಿ 14ರ ವರೆಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
Chikkaballapura Utsava : Show in one platform CM – Kichcha Sudeep…








