Accident : ಬೈಕ್ ಗೆ ಕಾರು ಡಿಕ್ಕಿ , ಹಿಂಬದಿ ಸವಾರ ಸಾವು
ಚಿಕ್ಕಬಳ್ಳಾಪುರ : ಬೈಕ್ ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಸವಾರ ಸಾವನಪ್ಪಿರುವ ಘಟನೆ ಚಿಕ್ಕಿಬಳ್ಳಾಪುರದ ಕಂದವಾರ ಗ್ರಾಮದ ಬಳಿ ನಡೆದಿದೆ..
ಮೃತ ವ್ಯಕ್ತಿ ಮುದ್ದೇನಹಳ್ಳಿ ಗ್ರಾಮದ 60 ವರ್ಷದ ಮುನಿಯಪ್ಪ ಎಂದು ತಿಳಿದು ಬಂದಿದೆ.
ನೆನ್ನೆ ರಾತ್ರಿ ಚಿಕ್ಕಬಳ್ಳಾಪುರ ಉತ್ಸವ ನೋಡಲು ಚಿಕ್ಕಬಳ್ಳಾಪುರ ನಗರಕ್ಕೆ ಬರುತ್ತಿದ್ದ ವೇಳೆ ಕಂದವಾರ ಗ್ರಾಮದ ಬಳಿ ಅತಿ ವೇಗದಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ ತೀವ್ರ ಗಾಯಗೊಂಡ ಮುನಿಯಪ್ಪ ಹಾಗೂ ಬೈಕ್ ಸವಾರ ಶಶಿ ಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನಿಸುವ ವೇಳೆ ಮುನಿಯಪ್ಪ ಮೃತಪಟ್ಟಿದ್ದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಶಶಿ ಪರಿಸ್ಥಿತಿ ಗಂಭೀರವಾಗಿದೆ .
ಘಟನೆ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಮಾರ್ಗ ಬದಲಿಸಿದ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿ ಘಟನೆ ನಡೆದಿದೆ ಎನ್ನಲಾಗಿದೆ..








