central Senegal : ಭೀಕರ ಬಸ್ ಅಪಘಾತದಿಂದಾಗಿ 40 ಮಂದಿ ದಾರುಣ ಸಾವು….
ಪಶ್ಚಿಮ ಆಫ್ರಿಕಾದ ಸೆಂಟ್ರಲ್ ಸೆನೆಗಲ್ನಲ್ಲಿ ಎರೆಡು ಬಸ್ ಗಳ ನಡುವೆ ಬೀಕರ ಅಪಘಾತ ಸಂಭವಿಸಿ 40 ಕ್ಕೂ ಅಧಿಕ ಜನರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗ್ಗೆ 3:30 ರ ಸುಮಾರಿಗೆ ಕಾಫಿನ್ ಪ್ರದೇಶದ ಗ್ನಿವಿ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ ಎಂದು ಅಧ್ಯಕ್ಷ ಮ್ಯಾಕಿ ಸಾಲ್ ಟ್ವೀಟ್ ಮಾಡಿದ್ದಾರೆ.
ಬಸ್ ಟೈರ್ ಪಂಕ್ಚರ್ ಆಗಿ ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಸ್ ರಸ್ತೆಗೆ ಅಡ್ಡಲಾಗಿ ನಿಂತಿದ್ದಾಗ ಮತ್ತೊಂದು ಬಸ್ ಡಿಕ್ಕಿ ಹೊಡೆದಿದೆ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದು, 78 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
“ಗ್ನಿಬಿಯಲ್ಲಿ ಇಂದು ಸಂಭವಿಸಿದ ಅಪಘಾತದಿಂದ 40 ಸಾವುಗಳೂ ಮತ್ತು ಅನೇಕ ಗಂಭೀರ ಗಾಯಗಳಿಗೆ ನಾನು ತೀವ್ರ ದುಃಖಿತನಾಗಿದ್ದೇನೆ. ಮೃತ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ, ” ಎಂದು ಪ್ರೆಸಿಡೆಂಟ್ ಮ್ಯಾಕಿ ಸಾಲ್ ಹೇಳಿದ್ದಾರೆ. ಸೋಮವಾರದಿಂದ ಮೂರು ದಿನಗಳ ಶೋಕಾಚರಣೆಯನ್ನ ಘೋಷಿಸಿದದ್ದಾರೆ.
ಕಳಪೆ ರಸ್ತೆಗಳು, ಮತ್ತು ಚಾಲಕರು ನಿಯಮಗಳನ್ನ ಪಾಲಿಸದ ಕಾರಣ ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಟ್ರಾಫಿಕ್ ಅಪಘಾತಗಳು ನಿಯಮಿತವಾಗಿ ಸಂಭವಿಸುತ್ತವೆ ಎಂದು ಸ್ಥಳೀಯರು ದೂರಿದ್ದಾರೆ.
Central Senegal: 40 people died due to a terrible bus accident.








