Covid19 – Xbb 1.5 variant : 8 ಕ್ಕೇರಿದ ಪ್ರಕರಣ ಸಂಖ್ಯೆ..!!
ದೇಶದಲ್ಲಿ ಹೊಸ ಕೊರೊನಾ ವೈರಸ್ ಆತಂಕ ಶುರುವಾಗಿದೆ.. ಕೇಸ್ ಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ..
ಅಮೆರಿಕದಲ್ಲಿ ಕೋವಿಡ್ ಉಲ್ಬಣಕ್ಕೆ ಕಾರಣವಾದ ಕೋವಿಡ್–19ರ ರೂಪಾಂತರಿ ಎಕ್ಸ್ ಬಿಬಿ 1.5 ತಳಿಯ ಮತ್ತೊಂದು ಹೊಸ ಪ್ರಕರಣ ಸೋಮವಾರ ಭಾರತದಲ್ಲಿ ಪತ್ತೆಯಾಗಿದ್ದು, ಇನ್ ಸ್ಯಾಕೋಗ್ ದತ್ತಾಂಶದ ಪ್ರಕಾರ ಇಂತಹ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಒಟ್ಟಾರೆ ಎಂಟಕ್ಕೆ ಏರಿದೆ.
ಉತ್ತರಾಖಂಡದಲ್ಲಿ ಈ ಹೊಸ ಪ್ರಕರಣ ಪತ್ತೆಯಾಗಿದೆ. ಇದಕ್ಕೂ ಮೊದಲು ಗುಜರಾತ್ ನಲ್ಲಿ ಮೂರು ಪ್ರಕರಣಗಳು ಕಂಡುಬಂದವು. ಕರ್ನಾಟಕ, ತೆಲಂಗಾಣ, ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿವೆ ಎಂದು ಭಾರತೀಯ ಕೋವಿಡ್ ವೈರಾಣು ಸಂರಚನಾ ವಿಶ್ಲೇಷಣಾ ಘಟಕ ಹೇಳಿದೆ.
ಎಕ್ಸ್ ಬಿಬಿ.1.5 ವೈರಾಣು ಓಮೈಕ್ರಾನ್ ಎಕ್ಸ್‌ಬಿಬಿಯ ರೂಪಾಂತರಿ. ಇದು ಓಮೈಕ್ರಾನ್ ಬಿಎ 2.10.1 ಮತ್ತು ಬಿಎ.2.75 ಉಪ ತಳಿಗಳಿಂದ ಮರುಸಂಯೋಜಿತವಾಗಿದೆ. ಅಮೆರಿಕದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಎಕ್ಸ್‌ಬಿಬಿ ಮತ್ತು ಎಕ್ಸ್‌ಬಿಬಿ.1.5 ಸಂಯೋಜಿತ ಸೋಂಕಿನ ಪ್ರಕರಣಗಳು ಶೇ 44ರಷ್ಟು ಇವೆ. ಇನ್ ಸ್ಯಾಕೋಗ್ ದತ್ತಾಂಶದ ಪ್ರಕಾರ, ಚೀನಾದಲ್ಲಿ ಉಲ್ಬಣಿಸಿರುವ ಓಮೈಕ್ರಾನ್‌ನ ಉಪತಳಿ ಬಿಎಫ್. 7 ಸೋಂಕಿನ ಒಂಬತ್ತು ಪ್ರಕರಣಗಳು ದೇಶದಲ್ಲಿ ಕಂಡುಬಂದಿವೆ.
Covid19 – Xbb 1.5 variant , india 8 case , saakshatv








