Carrot health benefits : ಆರೋಗ್ಯ, ಚರ್ಮ ಮತ್ತು ಕೂದಲಿಗೆ ಕ್ಯಾರೆಟ್ ನ ಪ್ರಯೋಜನಗಳು….
ಸಿಹಿ ಮತ್ತು ಖಾರದ ತಿಂಡಿಗಳಲ್ಲಿ ಮಿಶ್ರಣಗೊಳ್ಳುವ, ಹಾಗೇಯೂ ತಿನ್ನಬಹುದಾದ ತರಕಾರಿಯಲ್ಲಿ ಕ್ಯಾರೆಟ್ ಸಹ ಅದ್ಭುತ ಆಹಾರವಾಗಿದೆ. ಕ್ಯಾರೆಟ್ ಚರ್ಮ ಮತ್ತು ಕೂದಲಿಗೂ ಅದ್ಭುತ ಆಹಾರವಾಗಿದೆ. ಉತ್ತಮ ಆರೋಗ್ಯ, ಚರ್ಮ ಮತ್ತು ಕೂದಲಿಗೆ ಕ್ಯಾರೆಟ್ನ ಕೆಲವು ಪ್ರಯೋಜನಗಳು ಇಲ್ಲಿವೆ.
ಕ್ಯಾರೆಟ್ ನ ಆರೋಗ್ಯರ ಪ್ರಯೋಜನಗಳು…
ತೂಕ ಇಳಿಸಲು – ತೂಕ ಇಳಿಸಿಕೊಳ್ಳಲಕು ಕ್ಯಾರೆಟ್ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಸ್ವಲ್ಪ ಸಮಯದವರೆಗೆ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈಗಾಗಿ ಹಸಿವು ಕಡಿಮೆ ಮಾಡಿ ಕ್ಯಾಲೋರಿ ಸೇವನೆ ಕಡಿಮೆ ಮಾಡುತ್ತದೆ.
ರೋಗನಿರೋಧಕ ಶಕ್ತಿ – ಕ್ಯಾರೆಟ್ ನಲ್ಲಿ ರೋಗನಿರೋಧಕ ಶಕ್ತಿಯ ಹೆಚ್ಚು ಅಂಶಗಳಿವೆ. ಇದು ದೇಹದ ಬಲವಾದ ಪ್ರತಿ ರಕ್ಷಣಾ ವ್ಯವಸ್ಥೆಯನ್ನ ನಿರ್ಮಿಸಲು ಸಹಾಯ ಮಡುತ್ತವೆ. ಕ್ಯಾರೆಟ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ಬಲವಾದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಉತ್ತಮ ದೃಷ್ಟಿ – ಕ್ಯಾರೆಟ್ನಲ್ಲಿ ಕ್ಯಾರೊಟಿನಾಯ್ಡ್ ಗಳು ಸಮೃದ್ಧವಾಗಿವೆ, ಇವುಗಳು ನಮ್ಮ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ – ಕ್ಯಾರೆಟ್ ನಲ್ಲಿ ಫೈಬರ್ ಅಂಶಗಳು ಸಮೃದ್ಧವಾಗಿವೇ ಇದು ಸುಗಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಕ್ಯಾರೆಟ್ ಅನ್ನು ಸೇರಿಸುವುದರಿಂದ ಕರುಳಿನ ಚಲನೆಯು ಮೃದುವಾಗಿರುತ್ತದೆ.
ಚರ್ಮದ ಆರೋಗ್ಯಕ್ಕೆ ಕ್ಯಾರೆಟ್
ಕ್ಯಾರೆಟ್ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ, ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಚರ್ಮದಲ್ಲಿ ವಯಸ್ಸಾದ ಲಕ್ಷಣಗಳನ್ನ ನಿಭಾಯಿಸಲು ಇದರಲ್ಲಿರುವ ವಿಟಮಿನ್ ಎ ಸಹಕರಿಸುತ್ತದೆ.
ಕ್ಯಾರೆಟ್ನಲ್ಲಿರುವ ಹೆಚ್ಚುವರಿ ಪೊಟ್ಯಾಸಿಯಮ್ ದೇಹದ ಒಳಗಿನಿಂದ ತೇವಾಂಶವನ್ನ ಕಾಪಾಡುತ್ತದೆ.
ಕ್ಯಾರೆಟ್ನಲ್ಲಿರುವ ಬೀಟಾ ಕ್ಯಾರೋಟಿನ್ ನಿಮ್ಮ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
Carrot health benefits : Benefits of carrot for health, skin and hair….








