Priyanka Chopra : ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಂಡದ್ದು ಏಕೆ ಗೊತ್ತಾ ?
ಬಾಲಿವುಡ್ ನಲ್ಲಿ ಮಿಂಚಿದ ನಟಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಅವರನ್ನ ಕೈ ಹಿಡಿದ ನಂತರದಿಂದ ಹಾಲಿವುಡ್ ನಲ್ಲೇ ಗಟ್ಟಿಯಾಗಿ ನೆಲೆವೂರಿದ್ದಾರೆ. ನಟಿಯಾಗಿ , ಗಾಯಕಿಯಾಗಿ, ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕ ನಿರ್ಮಪಕಿಯಾಗಿಯೂ ಛಾಪೂ ಮೂಡಿಸಿದ್ದಾರೆ.
2018 ರಲ್ಲಿ ನಿಕ್ ಜೋನಸ್ ಜೊತೆ ವಿವಾಹವಾದ ಬಳಿಕ ಕಳೆದ ವರ್ಷ ಜನವರಿಯಲ್ಲಿ ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಎಂಬ ಹೆಣ್ಣು ಮಗುವಿಗೆ ಪೋಷಕರಾದರು. ಆದರೆ ಬಾಡಿಗೆ ತಾಯ್ತನದ ಮೂಲಕ ತಾಯಿಯಾದ ನಂತರ ಪ್ರಿಯಾಂಕಾ ಚೋಪ್ರಾ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದುವರೆಗೂ ಪ್ರತಿಕ್ರಿಯೆ ನೀಡದ ಪ್ರಿಯಾಂಕ ಇದೀಗ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. “ನನ್ನ ಮಗಳು ಹುಟ್ಟಿದಾಗ ಅದು ಬದುಕುತ್ತದೆ ಎಂದು ಅಂದುಕೊಂಡಿರಲಿಲ್ಲ. ಅವಳು ಹುಟ್ಟಿದಾಗ ನನ್ನ ಕೈ ಅಷ್ಟು ಗಾತ್ರವೂ ಇರಲಿಲ್ಲ. ಹಾಗಾಗಿ ಕೆಲವು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಬೇಕಾಯಿತು. ಇನ್‌ಕ್ಯುಬೇಟರ್‌ನಲ್ಲಿದ್ದಾಗ ಮಾಲ್ತಿಯನ್ನ ಹಾಗೆ ನೋಡಿ ನನಗೆ ಮತ್ತು ನಿಕ್ ತುಂಬಾ ದುಃಖವಾಗಿತ್ತು.
View this post on Instagram
ಬಾಡಿಗೆ ತಾಯ್ತನದ ಮೂಲಕ ನಾನು ತಾಯಿಯಾದೆ ಎಂದು ಬಹಳಷ್ಟು ಜನ ಹೇಳಿದ್ದಾರೆ. ನಾನು ನನ್ನ ಸೌಂದರ್ಯವನ್ನು ಕಳೆದುಕೊಳ್ಳಲು ಬಾಡಿಗೆ ತಾಯ್ತನಕ್ಕೆ ಹೋಗಿದ್ದೇನೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ನನಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ. ಅದಕ್ಕೇ ಬಾಡಿಗೆ ತಾಯ್ತನಕ್ಕೆ ಹೋಗಬೇಕಾಯಿತು. ಬಾಡಿಗೆ ತಾಯ್ತನ(ಸರೋಗೆಸಿ) ಅಷ್ಟು ಸುಲಭವಲ್ಲ. ನಿಕ್ ಮತ್ತು ನಾನು ಅದಕ್ಕಾಗಿ ನಾವು ಬಹಳ ಸಮಯ ಹುಡುಕಿದೆವು. ಕೊನೆಗೆ ಒಬ್ಬ ಮಹಿಳೆ ಒಪ್ಪಿದಳು. ಅವಳ ಸಹಾಯದ ಸಂಕೇತವಾಗಿ, ನಾನು ನನ್ನ ಮಗಳಿಗೆ ನನ್ನ ಹೆಸರಿನ ಜೊತೆಗೆ ಅವಳ ಹೆಸರನ್ನೂ ಇಟ್ಟಿದ್ದೇನೆ ಎಂದು ಪ್ರಿಯಾಂಕ ಬಹಿರಂಪಡಿಸಿದ್ದಾರೆ.
Priyanka Chopra: Do you know why a child was obtained through surrogacy?








