Sara Ali Khan : NGO ಮಕ್ಕಳೊಂದಿಗೆ ಸುಶಾಂತ್ ಹುಟ್ಟುಹಬ್ಬ ಆಚರಿಸಿದ ಸಾರಾ ಆಲಿ ಖಾನ್….
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಬದುಕಿದ್ದರೆ ಇಂದಿಗೆ 37 ನೇ ವರ್ಷದ ಬರ್ತಡೇ ಆಚರಿಸಿಕೊಳ್ಳುತ್ತಿದ್ದರು. ಜನವರಿ 21 ನಿನ್ನೆ ಸುಶಾಂತ್ ಸಿಂಗ್ ರಜಪೂತ್ ಜನ್ಮದಿನ. ಈ ಸಂದರ್ಭದಲ್ಲಿ ಸುಶಾಂತ್ ಸ್ನೇಹಿತೆ ಸಾರಾ ಆಲಿ ಖಾನ್ ಅವರ ಈ ಜನ್ಮ ದಿನವನ್ನ ವಿಶಿಷ್ಟವಾಗಿ ಆಚರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾರ್ ಆಲಿ ಖಾನ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸುತ್ತಿರುವುದನ್ನ ನೋಡಬಹುದು. ಈ ವೇಳೆ ಸಾರಾ ತುಂಬಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಲ ಮಕ್ಕಳೊಂದಿಗೆ ಸೇರೆ ಹ್ಯಾಪಿ ಬರ್ತಡೇ ಎಂದು ಹಾಡಿದ ಸಾರಾ ಸುಶಾಂತ್ ಗಾಗಿ ವಿಶೇಷ ಟಿಪ್ಪಣಿಯನ್ನ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಸುಶಾಂತ್. ಜನರ ನಗು ನಿಮಗೆ ಎಷ್ಟು ಅರ್ಥವಾಗಿದೆ ಎಂದು ನನಗೆ ತಿಳಿದಿದೆ. ನಾವು ಇಂದು ನಿಮ್ಮ ಮುಖದಲ್ಲಿ ನಗುವನ್ನ ತಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಜೈ ಭೋಲೆನಾಥ್’ ಎಂದು ಬರೆದಿದ್ದಾರೆ.
ಸಾರಾ ಅವರ ಈ ಪೋಸ್ಟ್ ನೋಡಿದ ನಂತರ, ಅಭಿಮಾನಿಗಳು ಅವರ ನಡೆನುಡಿಯನ್ನ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಕೇದಾರನಾಥ್ ಚಿತ್ರದ ಮೂಲಕ ಸಾರಾ ಬಾಲಿವುಡ್ ಪ್ರವೇಶ ಮಾಡಿದ್ದರು. ಈ ಚಿತ್ರದಲ್ಲಿ ಸುಶಾಂತ್ ನಾಯಕ ನಟರಾಗಿದ್ದರು.
Sara Ali Khan: Sara Ali Khan celebrated Sushant’s birthday with NGO children…







