Maharashtra : ಒಂದೇ ಕುಟುಂಬದ 7 ಜನರ ಮೃತದೇಹ ಭೀಮ ನದಿಯಲ್ಲಿ ಪತ್ತೆ…
ಭೀಮ ನದಿಯ ದಡದಿಂದ ಒಂದೇ ಕುಟುಂಬದ 7 ಮೃತದೇಹಗಳು ಪತ್ತೆಯಾದ ಘಟನೆ ಪುಣೆ ಜಿಲ್ಲೆಯ ದೌಂಡ್ ಪಟ್ಟಣದ ನದಿ ತೀರದ ಬಳಿ ನಡೆದಿದೆ.
ಎಲ್ಲಾ ಏಳು ಮೃತದೇಹಗಳನ್ನ ಹೊರತೆಯಲಾಗಿದ್ದು, ಕುಟುಂಬ ಸದಸ್ಯರು ಸಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಲಾಗುತ್ತಿದೆ. ವಿವರವಾದ ತನಿಖೆ ನಡೆಸುವವರೆಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 18 ರಂದು ನದಿಯಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಪೊಲಿಸರಿಗೆ ಮಾಹಿತಿ ಲಭಿಸಿದೆ. ನಂತರ ಸ್ಥಳಿಯ ಮುನ್ಸಿಪಲ್ ಕಾರ್ಪೋರೇಶನ್ ಜೊತೆಗೆ ಜಂಟಿ ಕಾರ್ಯಾಚರಣೆ ಆರಂಭಿಸಲಾಯಿತು. ಸೋಮವಾರ ನಾಲ್ಕು ಮೃತದೇಹಗಳು ಪತ್ತೆಯಾಗಿದೆ. ಮಂಗಳವಾರ ಮೂವರ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.
ಮೃತರ ಪೈಕಿ ಒಬ್ಬರ ಜೇಬಿನಿಂದ ಮೊಬೈಲ್ ಫೋನ್ ಪತ್ತೆಯಾಗಿದೆ. ಇದರಿಂದ ಅವರು ಗುರುತು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನ ಪರಂಗಾವ್ ಮೂಲದ ಉತ್ತಮ್ ಪವಾರ್(50) ಪತ್ನಿ ಸಂಗೀತ ಪವಾರ್ ಪುತ್ರಿ ರಾನು ಪುಲವಾರೆ, ಅಳಿಯ ಶ್ಯಾಮರಾವ್ ಪಂಡಿತ್ ಪುಲವಾರೆ ಮತ್ತು ಮೊಮ್ಮಕ್ಕಳಾದ ರಿತೇಶ್, ಚೋಟು ಕೃಷ್ಣ ಎಂದು ಗುರುತಿಸಲಾಗಿದೆ.
ಎಲ್ಲಾ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Maharashtra : Dead bodies of 7 people of the same family were found in the Bhima river…








