ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆನ್ನಲಾಗಿದ್ದು, ಮನೆಗೆಲಸಗಾರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸುಶಾಂತ್ ಸಿಂಗ್ ಬಿಹಾರದ ಪಾಟ್ನಾದಲ್ಲಿ 1986 ರ ಜನವರಿ 21 ರಂದು ಜನಿಸಿದ್ದು, ಕೇವಲ 34 ನೇ ವಯಸ್ಸಿಗೇ ಇಹಲೋಕ ತ್ಯಜಿಸಿರುವುದು ಬಾಲಿವುಡ್ ಮಂದಿಗೆ ದಿಗ್ಬ್ರಮೆಯನ್ನುಂಟು ಮಾಡಿದೆ. ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ಮ್ಯಾನೆಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು.
2013ರಲ್ಲಿ ಕಾಯ್ ಪೋ ಚೇ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಸುಶಾಂತ್, ಅದಾದ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಶುದ್ದ್ ದೇಸಿ ರೊಮ್ಯಾನ್ಸ್, ಪಿಕೆ ಸಿನಿಮಾಗಳು ಹೆಸರು ಸುಶಾಂತ್ ಗೆ ತಂದುಕೊಟ್ಟವು. ಇನ್ನು 2016ರಲ್ಲಿ ಮಹೇಂದ್ರ ಸಿಂಗ್ ಧೋನಿಯವರ ಜೀವಾನಾಧರಿತ ‘ಎಂಎಸ್. ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಸಿನಿಮಾ ಸುಶಾಂತ್ ಗೆ ಸ್ಟಾರ್ ಪಟ್ಟ ತಂದುಕೊಡ್ತು.
ಅದಾದ ಬಳಿಕ ರಾಬ್ತಾ, ವೆಲ್ ಕಮ್ ಟೂ ನ್ಯೂ ಯಾರ್ಕ್, ಕೇದಾರ್ ನಾಥ್, ಸೋನ್ ಚಿರಿಯಾ, ಛಿಚ್ಚೋರೆ ಸಿನಿಮಾಗಳಲ್ಲಿ ಗಮನಸೆಳೆದರು. ಇನ್ನೇನು ದಿಲ್ ಬೇಚಾರ ಸಿನಿಮಾ ಬಿಡುಗಡೆ ಆಗಬೇಕಿತ್ತು.








