ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಬಾ ಕ್ಷೇತ್ರದ ಈ ಭಾರಿ ಜಿದ್ದಾ ಜಿದ್ದಿನ ಕ್ಷೇತ್ರವಾಗಿ ಮಾರ್ಪಾಡಾಡುತ್ತಿದೆ. ಜೆಡಿಎಸ್ ನಿಂದ ಶರಣಗೌಡ ಕಂದಕೂರ್ ನಿಲ್ಲೋದು ಬಹುತೇಕ ಖಚಿತವಾಗುತ್ತಿದೆ. ಬಿಜೆಪಿ ಅಭ್ಯರ್ಥಿಯ ಹುಡುಕಾಟದಲ್ಲಿದೆ.ಆದ್ರೆ ಈ ಭಾರಿ ಕಾಂಗ್ರೆಸ್ ಟಿಕೆಟ್ ಸಾಕಷ್ಟು ಕೂತುಹಲ ಮೂಡಿಸಿದೆ. ಈ ಹಿಂದೆ ಮಲ್ಲಿಕಾರ್ಜುನ್ ಖರ್ಗೆ ಅವರು 8 ಬಾರಿ ಈ ಕ್ಷೇತ್ರದಿಂದ ಗೆದ್ದು ಬಂದು ಕಾಂಗ್ರೆಸ್ ಬಲಗೊಳಿಸಿದ್ರು. ಎರಡು ಬಾರಿ ಬಾಬುರಾವ್ ಚಿಂಚನಸೂರ್ ಕೂಡ ಕಾಂಗ್ರೆಸ್ ನಿಂದ ಶಾಸಕರಾಗಿದ್ರು. ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗುರುಮಠಕಲ್ ಕ್ಷೇತ್ರ ಕಳೆದ ಬಾರಿ ಜೆಡಿಎಸ್ ತೆಕ್ಕೆಗೆ ಜಾರಿದೆ.

ಈ ಭಾರಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಲು ಕಾಂಗ್ರೆಸ್ ಹಲವು ಲೆಕ್ಕಾಚಾರ ಹಾಕಿಕೊಂಡಿದೆ.ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟ ಜೋರಾಗಿ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷ ಗುರುಮಠಕಲ್ ನಲ್ಲಿ ಸಮರ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ರೆ ಗೆಲ್ಲಬಹುದು ಎಂದು ಜನ ಮಾತಾಡುತ್ತಿದ್ದಾರೆ.

ಅರುಣ್ ಕುಮಾರ್ ಗೆ ಟಿಕೆಟ್ ಕೊಡುವಂತೆ ಜನರ ಒತ್ತಾಯ..!
ಸದ್ಯ ಗುರುಮಠಕಲ್ ನ ವಿಶ್ವಮಾನವ ಫೌಂಡೇಶನ್ ನ ಅಧ್ಯಕ್ಷರಾದ ಅರುಣ್ ಕುಮಾರ್ ಕಲ್ಗದ್ದೆ ಯವರಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಜನ ಒತ್ತಾಯಿಸುತ್ತಿದ್ದಾರೆ.ಯಾಕಂದ್ರೆ
ಅರುಣ್ ಕುಮಾರ್ ಅವರು ಹಲವು ವರ್ಷದಿಂದ ವಿಶ್ವಮಾನವ ಪೌಂಡೇಶನ್ ಮೂಲಕ ಗುರುಮಠಕಲ್ ಜನರ ಸೇವೆಯನ್ನ ಮಾಡುತ್ತಿದ್ದಾರೆ.ಅಲ್ಲದೇ ಹಲವು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಬರಿಸಿ ನೆರವಾಗಿದ್ದಾರೆ.ನಮ್ಮ ಕಷ್ಟಕ್ಕೆ ನೆರವಾಗುವ ನಮ್ಮ ಅರುಣ್ ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿ ಅಂತ ಬಯಸುತ್ತಿದ್ದಾರೆ.ಸದ್ಯ ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗ್ತಿದ್ದು ಯಾರಿಗೆ ಟಿಕೆಟ್ ಸಿಗಲಿದೆ ಅನ್ನೊದನ್ನ ನೋಡಬೇಕಿದೆ.








