ಬೆಂಗಳೂರಿನಲ್ಲಿ ಪ್ರಧಾನಿ ಮೋದಿ – G20 ಇಂಡಿಯಾ ಎನರ್ಜಿ ವೀಕ್ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ…
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದು ಅವರನ್ನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಬರಮಾಡಿಕೊಂಡರು. ಈ ವೇಳೆ ಕೇಂದ್ರ ಪೆಟ್ರೋಲಿಂ ಸಚಿವರಾದ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿಂದ್ದರು.
ನಂತರ ಪ್ರಧಾನಿ ಬೆಂಗಳೂರಿನ ನೆಲಮಂಗಲದ ಮಾದವಾರದ ಬಳಿ ಇರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (Bengaluru International Exhibition Centre) ಪ್ರಧಾನಿಗಳು ಇಂಧನ ಸಪ್ತಾಹ ಉದ್ಘಾಟಿಸಿದರು.
ಇಂಧನ ಕ್ಷೇತ್ರದಲ್ಲಿ ಭಾರತ ಮಾಡಿರುವ ಸಾಧನೆಯನ್ನು ಜಾಹೀರುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಭಾರತ ಇಂಧನ ಸಪ್ತಾಹ 2023 ಕಾರ್ಯಕ್ರಮಕ್ಕೆ (IEW- India Energy Week 2023) ಚಾಲನೆ ನೀಡಿದ್ದಾರೆ.
Narendra Modi: Prime Minister Modi launched the G20 India Energy Week…