Traffic Fine : 9 ದಿನದಲ್ಲಿ 52.49 ಲಕ್ಷ ಕೇಸು ಇತ್ಯರ್ಥ, 122.07 ಕೋಟಿ ರೂ. ಟ್ರಾಫಿಕ್ ದಂಡ ಸಂಗ್ರಹ
122.07 ಕೋಟಿ ರೂ. ಟ್ರಾಫಿಕ್ ದಂಡ ಸಂಗ್ರಹ
9 ದಿನದಲ್ಲಿ 52.49 ಲಕ್ಷ ಕೇಸು ಇತ್ಯರ್ಥ
ರಾಜ್ಯಾದ್ಯಂತ 50 % ರಿಯಾಯಿತಿ
ಶನಿವಾರ ಅಂತ್ಯಗೊಂಡ ಶೇ.50ರ ರಿಯಾಯಿತಿ ಸೌಲಭ್ಯ
ಕೊನೆಯ ದಿನ ಬೆಂಗಳೂರಿನಲ್ಲಿ 31.26 ಕೋಟಿ ಸಂಗ್ರಹ
ರಾಜ್ಯ ಸರ್ಕಾರ , ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ಮೊತ್ತ ಪಾವತಿಗೆ ನೀಡಿದ್ದ ಶೇ.50ರ ರಿಯಾಯ್ತಿ ಸೌಲಭ್ಯ ಶನಿವಾರ ಅಂತ್ಯಗೊಂಡಿದ್ದು, ರಾಜ್ಯಾದ್ಯಂತ ಕಳೆದ 9 ದಿನಗಳಲ್ಲಿ 52.49 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿಂದ ಒಟ್ಟು 122.07 ಕೋಟಿ ರು.ಗೂ ಹೆಚ್ಚು ಬಾಕಿ ದಂಡ ಸಂಗ್ರಹವಾಗಿದೆ.
ಬೆಂಗಳೂರಿನಲ್ಲಿ ಕಳೆದ 9 ದಿನಗಳಲ್ಲಿ 41.20 ಲಕ್ಷ ಪ್ರಕರಣಗಳಿಂದ ಒಟ್ಟು 120.76 ಕೋಟಿ ರೂ. ಬಾಕಿ ದಂಡ ಸಂಗ್ರಹವಾಗಿದೆ. ಇದೇ ವೇಳೆ, ಹುಬ್ಬಳ್ಳಿ-ಧಾರವಾಡದಲ್ಲಿ 73.31 ಲಕ್ಷ ದಂಡ ವಸೂಲಿಯಾಗಿದೆ. ಬೆಳಗಾವಿಯಲ್ಲಿ 29,520 ಪ್ರಕರಣಗಳಲ್ಲಿ 57.94 ಲಕ್ಷ ದಂಡ ಪಾವತಿಯಾಗಿದೆ.
Traffic Fine , bengaluru traffic rules , saakshatv







