Bus accident : ಕಂದಕ್ಕೆ ಬಿದ್ದ ವಲಸಿಗರನ್ನ ಹೊತ್ತೊಯ್ಯುತ್ತಿದ್ದ ಬಸ್ – 39 ಮಂದಿ ಸಾವು…
66 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಟ್ಟದಿಂದ ಬಿದ್ದ ಪರಿಣಾಮ 39 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ, ಗಾಯಳುಗಳನ್ನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳಿಯ ಪೊಲೀಸರು ತಿಳಿಸಿದ್ದಾರೆ.
ಅಮೆರಿಕದ ಪಶ್ಚಿಮ ಪನಾಮದಲ್ಲಿ ವಲಸಿಗರೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ. ಕೊಲಂಬಿಯಾದಿಂದ ಪನಾಮಕ್ಕೆ ಡೇರಿಯನ್ ಲೈನ್ ಅನ್ನು ದಾಟಿದ ಜನರನ್ನ ಗೌಲಾಕಾ ನಿರಾಶ್ರಿತರ ಶಿಬಿರಕ್ಕೆ ಸಾಗಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಪರವಾಗಿ, ಪನಾಮಾ ಅಧ್ಯಕ್ಷ ಲೊರೆಂಜೊ ಕಾರ್ಟಿಜೊ ಅವರು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಪನಾಮದಲ್ಲಿ ವಲಸಿಗರು ಕಂಡ ಅತ್ಯಂತ ಭೀಕರ ಅಪಘಾತ ಇದಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ನಲ್ಲಿ ಒಟ್ಟು 66 ಜನರು ಪ್ರಯಾಣಿಸುತ್ತಿದ್ದರು ಗಾಯಗೊಂಡವರಲ್ಲಿ ಐದಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ ಎಂದು ಪನಾಮದ ಆರೋಗ್ಯ ಸಚಿವಾಲಯ ತಿಳಿಸಿದೆ.
Bus accident: Bus carrying migrants fell into a ditch – 39 people died…








