ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಪಶ್ಚಿಮ ಬಂಗಾಳ ಜನಾಂಗೀಯ ವಿವಾದಕ್ಕೆ ಕಾರಣವಾಯಿತು ಪಠ್ಯದಲ್ಲಿದ್ದ ಕಪ್ಪು ಮನುಷ್ಯನ ಚಿತ್ರ

admin by admin
June 15, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಪಶ್ಚಿಮ ಬಂಗಾಳ ಜನಾಂಗೀಯ ವಿವಾದಕ್ಕೆ ಕಾರಣವಾಯಿತು ಪಠ್ಯದಲ್ಲಿದ್ದ ಕಪ್ಪು ಮನುಷ್ಯನ ಚಿತ್ರ

ಕೊಲ್ಕತ್ತಾ, ಜೂನ್ 15: ಇತ್ತೀಚೆಗಷ್ಟೇ ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯನ ಹತ್ಯೆಯಿಂದ ಜನಾಂಗೀಯ ಘರ್ಷಣೆಗೆ ಅಮೆರಿಕ ಅಕ್ಷರಶಃ ಹೊತ್ತಿ ಉರಿಯಿತು. ಇದೀಗ ಪಶ್ಚಿಮ ಬಂಗಾಳದ ಶಾಲೆಯೊಂದು ಪಠ್ಯಪುಸ್ತಕದಲ್ಲಿ ಸೂಚಿಸಿದ ಚಿತ್ರದಿಂದ ಜನಾಂಗೀಯ ತಾರತಮ್ಯದ ಆರೋಪಕ್ಕೆ ‌ಗುರಿಯಾಗಿದೆ.

Related posts

What should the God's lamp look like inside the house?

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

February 15, 2026
ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

February 15, 2026


ಪಶ್ಚಿಮ ಬಂಗಾಳದ ಬುರ್ದ್ವಾನ್ ಮುನ್ಸಿಪಲ್ ಬಾಲಕಿಯರ ಶಾಲೆಯ‌ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಇಂಗ್ಲೀಷ್ ಪಠ್ಯ ಪುಸ್ತಕದಲ್ಲಿ ‘ಕೊಳಕು’ ಎಂಬ ಪದವನ್ನು ಸೂಚಿಸಲು ಕಪ್ಪು ಚರ್ಮದ ಮನುಷ್ಯನ ಚಿತ್ರವನ್ನು ತೋರಿಸಲಾಗಿದೆ. ಕಪ್ಪು ವರ್ಣೀಯ ಮನುಷ್ಯನ ಚಿತ್ರವನ್ನು ಬಳಸಿಕೊಳ್ಳುವ ಮೂಲಕ ಪಶ್ಚಿಮ ಬಂಗಾಳದ ಈ ಶಾಲೆಯು ಇದೀಗ ಜನಾಂಗೀಯ ತಾರತಮ್ಯದ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಿದೆ.
ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ‘ಎಬಿಸಿ ಸ್ಟಡಿ’ ಎಂಬ
ಇಂಗ್ಲೀಷ್ ಪುಸ್ತಕದಲ್ಲಿ ‘ಯು’ ಎಂಬ ಅಕ್ಷರದಿಂದ ‌ಪ್ರಾರಂಭವಾಗುವ ಪದಕ್ಕೆ ಅಗ್ಲೀ ಎಂದು ‌ಉದಾಹರಣೆ ನೀಡಿದ್ದು, ಆ ಪದವನ್ನು ಸೂಚಿಸಲು ಕಪ್ಪು ಬಣ್ಣದ ಮನುಷ್ಯನ ಚಿತ್ರವನ್ನು ಬಳಸಿಕೊಳ್ಳಲಾಗಿದೆ.
ಕೋಲ್ಕತ್ತಾದ ಬಂಗಬಾಸಿ ಸಂಜೆ ಕಾಲೇಜಿನ ಪ್ರಾಧ್ಯಾಪಕರಾದ ಸುದೀಪ್ ಮಜುಂದರ್ ಅವರು ತಮ್ಮ ಮಗಳ ಪಠ್ಯ ಪುಸ್ತಕವನ್ನು ಗಮನಿಸುವಾಗ ಅದರಲ್ಲಿದ್ದ ಈ ಆಕ್ಷೇಪಾರ್ಹ ಚಿತ್ರಣ ಅವರ ಅರಿವೆಗೆ ಬಂದಿದೆ. ಆ ಕೂಡಲೇ ರಾಮಕೃಷ್ಣ ಪಲ್ಲಿ ಜಿಲ್ಲೆಯ ನಿವಾಸಿಯಾದ ಸುದೀಪ್ ಮಜುಂದರ್ ಜಿಲ್ಲಾ ಶಾಲಾ ಇನ್ಸ್ ಪೆಕ್ಟರ್ (ಪ್ರಾಥಮಿಕ, ಪೂರ್ವ ಬುರ್ದ್ವಾನ್) ಸ್ವಪನ್ ಕುಮಾರ್ ದತ್ತಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಶಾಲಾ ಇನ್ಸ್ ಪೆಕ್ಟರ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸುದೀಪ್ ಮಜುಂದರ್ ಅವರಿಗೆ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಧ್ಯಾಪಕ ಸುದೀಪ್ ಮಜುಂದರ್ ನಾನು ನನ್ನ ಮಗಳಿಗೆ ಪಾಠ ಕಲಿಸುವಾಗ ಅದರಲ್ಲಿ ‘ಕೊಳಕು’ ಎಂಬ ಪದಕ್ಕೆ ನೀಡಲಾಗಿದ್ದ ಚಿತ್ರಣವನ್ನು ನೋಡಿ ಆಘಾತವಾಯಿತು. ಇದು ಯಾವ ರೀತಿಯ ಶಿಕ್ಷಣ. ಆದ್ದರಿಂದ ತಕ್ಷಣವೇ ನಾನು ಶಾಲಾ ಇನ್ಸ್​ಪೆಕ್ಟರ್​ರನ್ನು ಸಂಪರ್ಕಿಸಿ ಈ ಬಗ್ಗೆ ಅವರ ಗಮನ ಸೆಳೆದು, ಕ್ರಮ ಕೈಗೊಳ್ಳುವಂತೆ ತಿಳಿಸಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥ ಚಟರ್ಜಿಯವರು ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಾಲಾ ಅಧಿಕಾರಿಗಳನ್ನು ಅಮಾನತು‌ ಮಾಡಿದ್ದು, ಈ ಪುಸ್ತಕವು ಶಿಕ್ಷಣ ಇಲಾಖೆಯಿಂದ ಉಲ್ಲೇಖಿಸಲ್ಪಟ್ಟ ಪಠ್ಯದ ಭಾಗವಲ್ಲ ಎಂದು ಹೇಳಿದ್ದಾರೆ. ‌ ಎಳೆಯ ವಯಸ್ಸಿನ ಮಕ್ಕಳ ಮನಸ್ಸಿನಲ್ಲಿ ಪೂರ್ವಾಗ್ರಹವನ್ನು ಉಂಟು ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದಿರುವ ಶಿಕ್ಷಣ ಸಚಿವರು ಇಬ್ಬರು ಶಾಲಾ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳ ಪೊಷಕರು ಆ ಪುಸ್ತಗಳನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

Tags: #ಕರ್ನಾಟಕblack coloristtext bookWest Bengalಜನಾಂಗೀಯಬೆಂಗಳೂರು
ShareTweetSendShare
Join us on:

Related Posts

What should the God's lamp look like inside the house?

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

by admin
February 15, 2026
0

ಮನೆಯೊಳಗೆ ದೇವರ ದೀಪ ಹೇಗಿರ ಬೇಕು? ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು'...

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

ಮಾಲೆಗಾಂವ್ ಪಾಲಿಕೆಯಲ್ಲಿ ಗಾಂಧಿ ಅಂಬೇಡ್ಕರ್ ಬದಲು ಟಿಪ್ಪು ಫೋಟೋ ಬಿಜೆಪಿ ಆಕ್ರೋಶ:ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿದ್ರೆ ತಪ್ಪೇನು ಉಪಮೇಯರ್ ಪ್ರಶ್ನೆ

by Shwetha
February 15, 2026
0

ಮಹಾರಾಷ್ಟ್ರದ ಮಾಲೆಗಾಂವ್ ಮಹಾನಗರ ಪಾಲಿಕೆಯಲ್ಲಿ ತೀವ್ರ ಸ್ವರೂಪದ ರಾಜಕೀಯ ವಿವಾದವೊಂದು ಭುಗಿಲೆದ್ದಿದೆ. ಮಹಾನಗರ ಪಾಲಿಕೆಯ ಉಪಮೇಯರ್ ಅವರ ಅಧಿಕೃತ ಕೊಠಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ...

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಬರೋಬ್ಬರಿ 141 ಸ್ಥಾನ:2028ರ ಚುನಾವಣೆಗೆ ಈಗಲೇ ಭವಿಷ್ಯ ನುಡಿದ ಡಿಕೆ ಶಿವಕುಮಾರ್

by Shwetha
February 15, 2026
0

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಲೆ ದಿನೇ ದಿನೇ ಹೆಚ್ಚುತ್ತಿದ್ದು, ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬರೋಬ್ಬರಿ 141 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ...

ನನ್ನ ಅಜೆಂಡಾ ಸಿಎಂ ಕುರ್ಚಿಯಲ್ಲ, ಭ್ರಷ್ಟ ಸರ್ಕಾರ ಕಿತ್ತೊಗೆಯುವುದೇ ಗುರಿ: ಸಿಎಂ ಯಾರು ಎಂಬ ಚರ್ಚೆಯೇ ಅಪ್ರಬುದ್ಧತೆ ಎಚ್‌ಡಿಕೆ

ನನ್ನ ಅಜೆಂಡಾ ಸಿಎಂ ಕುರ್ಚಿಯಲ್ಲ, ಭ್ರಷ್ಟ ಸರ್ಕಾರ ಕಿತ್ತೊಗೆಯುವುದೇ ಗುರಿ: ಸಿಎಂ ಯಾರು ಎಂಬ ಚರ್ಚೆಯೇ ಅಪ್ರಬುದ್ಧತೆ ಎಚ್‌ಡಿಕೆ

by Shwetha
February 15, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ 2028ರ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಈಗಲೇ ಕಾವೇರುತ್ತಿದೆ. ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಆಗಲು...

ರಾಜ್ಯದ ಜನತೆಗೆ ಬಂಪರ್ ಸುದ್ದಿ: ಫೆಬ್ರವರಿಯಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ, ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಗ್ಯಾರಂಟಿ!

ರಾಜ್ಯದ ಜನತೆಗೆ ಬಂಪರ್ ಸುದ್ದಿ: ಫೆಬ್ರವರಿಯಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ, ಅನರ್ಹ ಕಾರ್ಡ್‌ಗಳಿಗೆ ಕತ್ತರಿ ಗ್ಯಾರಂಟಿ!

by Shwetha
February 15, 2026
0

ಬೆಂಗಳೂರು: ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ (Ration Card) ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕಳೆದ ಕೆಲವು ಸಮಯದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram