ನವದೆಹಲಿ : ಆಸ್ಪತ್ರೆಗಳಲ್ಲಿ ಕಳೆದ 65 ವರ್ಷದಲ್ಲಿ ಕಾಣದೆ ಇರುವ ವೆಂಟಿಲೆಟರ್ಸ್ ನರೇಂದ್ರ ಮೋದಿ ಸರ್ಕಾರದಲ್ಲಿ ಕಾಣಿಸುತ್ತಿವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್ ಟಾಂಗ್ ಕೊಟ್ಟಿದ್ದಾರೆ.
ಕೊರೊನಾ ಸಂದರ್ಭದಲ್ಲಿ ದೇಶವನ್ನು ಲಾಕ್ ಡೌನ್ ಮಾಡಲಾಗಿತ್ತು. ಹಾಗಾಗಿ ದೇಶ ಆರ್ಥಿಕ ಸಂಕಷ್ಟ ಎದುರಿಸುವಂತಾಗಿತ್ತು. ಈ ಕಾರಣಕ್ಕೆ ದೇಶದ ಕೆಲ ಸಂಸ್ಥೆಗಳು ಮತ್ತು ದಾನಿಗಳು ಪಿಎಂ ಕೇರ್ ಗೆ ಸಹಾಯದ ಹಸ್ತ ಚಾಚಿದ್ದರು. ಆದರೆ ಪಿ.ಎಂ ಕೇರ್ ಗೆ ಎಷ್ಟು ಸಹಾಯಧನ ಜಮಾ ಆಗಿದೆ ಎಂಬ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ ವಿರೋಧ ಪಕ್ಷಗಳು ಪಿ.ಎಂ ಕೇರ್ ಗೆ ಜಮಾ ಆಗಿರುವ ಸಹಾಯಧನದ ಲೆಕ್ಕ ನೀಡಿ ಎಂದು ಕೇಂದ್ರ ಸರ್ಕಾರದ ವಿರುದ್ದ ಮುಗಿಬಿದ್ದಿದ್ದವು.
ಈ ವಿಚಾರಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಪ್ರತಿಕ್ರಿಯಿಸಿ, ಪಿ.ಎಂ. ಕೇರ್ ಲೆಕ್ಕ ಕೇಳುವವರೆ ಇಲ್ಲಿ ಗಮನಿಸಿ, ಪಿ.ಎಂ ಕೇರ್ ಹಣದಿಂದ ಆಸ್ಪತ್ರೆಗಳಿಗೆ ವೆಂಟಿಲೆಟರ್ ಗಳು ತಲುಪುತ್ತಿವೆ ಎಂದು ವಿರೋಧ ಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು , ಪಿ.ಎಂ ಕೇರ್ ಹಣದಿಂದ ಆಸ್ಪತ್ರೆಗಳಿಗೆ ವೆಂಟಿಲೆಟರ್ ಗಳು ತಲುಪುತ್ತಿವೆ. ಕಳದೆ 65 ವರ್ಷದಲ್ಲಿ ಕಾಣದೆ ಇರುವ ವೆಂಟಿಲೆಟರ್ಸ್ ನರೇಂದ್ರ ಮೋದಿ ಸರ್ಕಾರದಲ್ಲಿ ಕಾಣಿಸುತ್ತಿವೆ. ಅದಕ್ಕಾಗಿ ನಾನು ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಧನ್ಯವಾದಗಳು ತಿಳಿಸುತ್ತೇನೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಕುಟುಕಿದ್ದಾರೆ.









