Chandrayaan-3 : ಪ್ರಮುಖ ಪರೀಕ್ಷೆ ಯಶಸ್ವಿ – ಜೂನ್ ತಿಂಗಳಲ್ಲಿ ಉಡಾವಣೆ ಸಾಧ್ಯತೆ…
ಮತ್ತೊಮ್ಮೆ ಚಂದ್ರನತ್ತ ಪ್ರಯಾಣ ಬೆಳೆಸಲು ಇಸ್ರೋ ಕೈಗೊಂಡಿರುವ ಚಂದ್ರಯಾನ 3 ನ ಪ್ರಮುಖ ಪರೀಕ್ಷೆಯೊಂದು ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾನುವಾರ ತಿಳಿಸಿದೆ.
ಲ್ಯಾಂಡರ್ ಜನವರಿ 31 ಮತ್ತು ಫೆಬ್ರವರಿ 2 ರ ನಡುವೆ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಯಶಸ್ವಿಯಾಗಿ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಇಂಟರ್ಫರೆನ್ಸ್/ಎಲೆಕ್ಟ್ರೋ-ಮ್ಯಾಗ್ನೆಟಿಕ್ ಕಾಂಪಾಟಿಬಿಲಿಟಿ (ಇಎಂಐ/ಇಎಂಸಿ) ಪರೀಕ್ಷೆಗೆ ಒಳಗಾಗಿದೆ.
ಬಾಹ್ಯಾಕಾಶ ಪರಿಸರದಲ್ಲಿ ಉಪಗ್ರಹ ಕಾರ್ಯನಿರ್ವಹಣೆ ಮತ್ತು ನಿರೀಕ್ಷಿತ ವಿದ್ಯುತ್ಕಾಂತೀಯ ಮಟ್ಟಗಳೊಂದಿಗೆ ಅವುಗಳ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಉಪಗ್ರಹ ಕಾರ್ಯಾಚರಣೆಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಇಸ್ರೋ ಹೇಳಿದೆ.
ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಚಂದ್ರಯಾನ-3 ಅಂತರಗ್ರಹ ಮಿಷನ್ ಪ್ರಮುಖವಾಗಿ ಪ್ರೊಪಲ್ಷನ್, ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್ಗಳನ್ನು ಹೊಂದಿದೆ. ಇದೇ ವರ್ಷ ಜೂನ್ ತಿಂಗಳಲ್ಲಿ ಚಂದ್ರಯಾನ -3 ಉಡಾವಣೆ ಸಾಧ್ಯತೆಯಿದೆ.
ಉಡಾವಣೆಯನ್ನು ನಿರ್ದಿಷ್ಟ ಉಡಾವಣಾ ಟೈಮ್ ಲೈನ್ ಪ್ರಕಾರ ಮಾಡಬೇಕಾಗುತ್ತದೆ. ಜೂನ್ ಮತ್ತು ಜುಲೈ 2023 ರ ನಡುವೆ ಉತ್ತಮ ಸೂಕ್ತ ಅವಕಾಶವಿದೆ. ಈ ಕಾರ್ಯಚರಣೆ ಭಾರತದ ಅತ್ಯಂತ ಭಾರವಾದ ರಾಕೆಟ್ LVM 3 ಯನ್ನ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
2019 ರಲ್ಲಿ ಚಂದ್ರಯಾನ 2 ಮಿಷನ್ ನಿಯಂತ್ರಿವಾಗಿ ಚಂದ್ರನ ಮೇಲೆ ಲ್ಯಾಂಡ್ ಆಗುವಲ್ಲಿ ವಿಫಲಗೊಂಡಿತ್ತು. ಕ್ರಾಶ್ ಲ್ಯಾಂಡ್ ಆಗಿತ್ತು. ಈ ಘಟನೆ ಮತ್ತೆ ಪುನರಾವರ್ತನೆಯಾಗದಂತೆ ಹಲವು ಕ್ರಮಗಳನ್ನ ತೆಗೆದುಕೊಂಡಿರುವುದಾಗಿ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಸೋಮನಾಥ್ ತಿಳಿಸಿದ್ದಾರೆ.
Chandrayaan-3: Major test successful – launch likely in June…