Madhya Pradesh : ಅಂಕಪಟ್ಟಿ ನೀಡದಕ್ಕೆ ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿದ ವಿದ್ಯಾರ್ಥಿ…
ಫಾರ್ಮಸಿ ಕಾಲೇಜಿನ ಮಾಜಿ ವಿದ್ಯಾರ್ಥಿಯೊಬ್ಬ ಅಂಕಪಟ್ಟಿ ನೀಡಲು ತಡ ಮಾಡಿದ ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ನಂತರ ವಿದ್ಯಾರ್ಥಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ವಿಮುಕ್ತ ಶರ್ಮಾ (50) ಅವರು ಶೇ 80 ರಷ್ಟು ಸುಟ್ಟ ಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಪೊಲೀಸರು ತಿಳಿಸಿದ್ದಾರೆ. ಮಾಜಿ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ ಗೂ ಶೇ 40ರಷ್ಟು ಸುಟ್ಟ ಗಾಯಗಳಾಗಿವೆ.
ಸಂಜೆ 4 ಗಂಟೆಗೆ, ಪ್ರಾಂಶುಪಾಲರು ಮನೆಗೆ ತೆರಳಲು ಕಾರು ಹತ್ತುವ ಸಂಭ್ರಮದಲ್ಲಿದ್ದಾಗ ಅಶುತೋಷ್ ಶ್ರೀವಾಸ್ತವ್ ತಡೆದು ಅಂಕಪಟ್ಟಿ ವಿಚಾರವಾಗಿ ತೀವ್ರ ವಾಗ್ವಾದ ನಡೆಸಿದ್ದ. ನಂತರ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಇದೇ ವಿದ್ಯಾರ್ಥಿ ಕೆಲ ದಿನಗಳ ಹಿಂದೆ ಪುರುಷ ಅಧ್ಯಾಪಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಜಾಮೀನು ಪಡೆದು ಕೆಲವು ವಾರಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Principal Set On Fire By Former Student At Madhya Pradesh College








