Bollywood : ರೀಮೇಕ್ ನಿಂದ ಪ್ರಯೋಜನವಾಗ್ತಿಲ್ಲ … ಆದ್ರೂ ಕಾಪಿ ಚಾಳಿಯನ್ನ ಬಾಲಿವುಡ್ ಬಿಡ್ತಿಲ್ಲ..!!
ಒಂದು ಟೈಮ್ ನಲ್ಲಿ ತಾನೇ ಇಂಡಸ್ಟ್ರಿಯ ಕಿಂಗ್ ಎಂದು ಮೆರೆಯುತ್ತಿದ್ದ ಬಾಲಿವುಡ್ ನ ಇದೀಗ ಕೇಳೋರೇ ಗತಿ ಇಲ್ಲಎಂಬಂತಾಗಿದೆ.
ರೀಮೇಕ್ ಸಿನಿಮಾಗಳೇ ಹೆಚ್ಚಾಗಿ ಮಾಡಿದ್ರೂ ಬಾಲಿವುಡ್ ನ ಕ್ರೇಜ್ ಇದ್ದ ಕಾರಣ ಆ ಸಿನಿಮಾಗಳು ಸಕ್ಸಸ್ ಕಾಣುತ್ತಿದ್ದವು.
ಆದ್ರೆ ಕಾಲ ಬದಲಾಗಿದೆ, ಜನರ ಯೋಚನೆ ಬದಲಾಗಿದೆ. ಅಭಿರುಚಿ ಬದಲಾಗಿದೆ. ಜನರು ಒರಿಜಿನಾಲಿಟಿಗೆ ಹೆಚ್ಚು ಮಹತ್ವ ಕೊಡಲು ಶುರು ಮಾಡಿದ್ದಾರೆ..
ಸೌತ್ ನಲ್ಲಿ ಬರುತ್ತಿರುವ ಒಳ್ಳೊಳ್ಳೆ ಸಿನಿಮಾಗಳನ್ನ ಡಬ್ಬಿಂಗ್ ವರ್ಷನ್ ನಲ್ಲಿಯೇ ನೋಡುತ್ತಿದ್ದಾರೆ.. ಹೀಗಾಗಿ ರೀಮೇಕ್ ಬಾಲಿವುಡ್ ಗಳ ರೀಮೇಕ್ ಸಿನಿಮಾಗಳು ಅಟ್ಟರ್ ಫ್ಲಾಪ್ ಆಗ್ತಿವೆ..
ಬಾಲಿವುಡ್ ಇತ್ತೀಚೆಗೆ ಯಾವ ರೀಮೇಕ್ ಸಿನಿಮಾಗಳನ್ನ ಮಾಡಿದ್ರೂ ಸೋಲುತ್ತಿದೆ.. ಇದಕ್ಕೆ ಲೇಟೆಸ್ಟ್ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಶೆಹಜಾದಾ..
ತೆಲುಗಿನ ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಅಲಾ ವೈಕುಂಠಪುರಂಲೋ ಸಿನಿಮಾದ ರೀಮೇಕ್ ಶೆಹಜಾದಾ ಥಿಯೇಟರ್ ಗಳಲ್ಲಿ ಫ್ಲಾಪ್ ಆಗಿದೆ.. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ್ದರು.
ಇಷ್ಟಾದ್ರೂ ಕೂಡ ಅದ್ಯಾಕೋ ಬಾಲಿವುಡ್ ಗೆ ರೀಮೇಕ್ ಸಂಸ್ಕೃತಿಯಿಂದ ಹೊರ ಬರೋಕೆ ಆಗುತ್ತಿಲ್ಲ ಅಂತ ಕಾಣ್ತಿದೆ. ಈಗಲೂ ರೀಮೇಕ್ ಸಿನಿಮಾಗಳ ಹಿಂದೆಯೇ ಓಡುತ್ತಿದೆ. ಬಾಲಿವುಡ್ ನಲ್ಲಿ ಮುಂದೆ ಸಾಕಷ್ಟು ರೀಮೇಕ್ ಸಿನಿಮಾಗಳು ಬರಲಿವೆ. ಅದರಲ್ಲೂ ಕಾರ್ತಿ ನಟನೆಯ ಖೈದಿ ರೀಮೇಕ್ ಅಜಯ್ ದೇವಗನ್ ನಟನೆಯ ಭೋಲಾ ಸಿನಿಮಾ ಬರಲಿದೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು , ಜನರು ಟೀಸರ್ ನ ತಿರಸ್ಕರಿಸಿರೋದೇ ಹೆಚ್ಚು.
ಯಾಕಂದ್ರೆ ಕಿಂಪ್ಲೀಟ್ ಸ್ಟೋರಿಯನ್ನೇ ವಿಚಿತ್ರವಾಗಿ ಬದಲಾಯಿಸಿಕೊಂಡಿದ್ದಾರೆಂಬ ಆರೋಪ ಸಿಟ್ಟು ನೆಟ್ಟಿಗರದ್ದು.
ಈ ಸಿನಿಮಾ ಮಾರ್ಚ್ 30ರಂದು ಬಿಡುಗಡೆ ಆಗಲಿದೆ. 3ಡಿ ಅವತರಣಿಕೆಯಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಸ್ವತಃ ಅಜಯ್ ದೇವಗನ್ ನಿರ್ದೇಶನ ಮಾಡಿದ್ದಾರೆ.
ಇನ್ನೂ ಅಕ್ಷಯ್ ಕುಮಾರ್ ರ ಸೆಲ್ಫಿ ಸಿನಿಮಾ ಬಗ್ಗೆ ಹೇಳೋದೆ ಬೇಡ.. ಕಳಪೆಯಲ್ಲೇ ಕಳಪೆ ಪ್ರದರ್ಶನ ಕಂಡಿದೆ ಈ ಸಿನಿಮಾ. ಇದು ಕೂಡ ಮಲಯಾಳಂನ ‘ಡ್ರೈವಿಂಗ್ ಲೈಸೆನ್ಸ್’ ಸಿನಿಮಾದ ರಿಮೇಕ್ ಆಗಿದೆ. ಇದನ್ನ ಜನ ತಿರಸ್ಕರಿಸಿದ್ದಾರೆ ಅಂತಲೇ ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಕುಮಾರ್ ಅವರ ವೃತ್ತಿಜೀವನದಲ್ಲಿ ಅತಿ ಕಳಪೆ ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ.
ಸಲ್ಮಾನ್ ಖಾನ್ , ಅಜಯ್ ದೇವಗನ್ , ಅಕ್ಷಯ್ ಕುಮಾರ್ ಎಲ್ಲರೂ ರೀಮೇಕ್ ಸಿನಿಮಾಗಳ ಹಿಂದೆ ಬಿದ್ದಿದ್ದು , ಭವಿಷ್ಯದಲ್ಲೂ ಅವರಿಗೆ ಸೋಲು ಕಾದಿದ್ಯಾ ಎಂಬ ಶಂಕೆ ಮೂಡುವುದು ಸಹಜ..
ತಮಿಳಿನ ಅಜಿತ್ ಕುಮಾರ್ ನಟನೆಯ ವೀರಂ ಚಿತ್ರವನ್ನು ಹಿಂದಿಯಲ್ಲಿ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಶೀರ್ಷಿಕೆಯಲ್ಲಿ ಸಲ್ಲು ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ವರ್ಷ ಈದ್ ಪ್ರಯುಕ್ತ ಈ ಚಿತ್ರ ರಿಲೀಸ್ ಆಗಲಿದೆ.
ಈಗ ಪ್ರಶ್ನೆ , ರಿಲೀಸ್ ಗೆ ರೆಡಿಯಾಗಿರುವ ಈ ರೀಮೇಕ್ ಸಿನಿಮಾಗಳನ್ನ ಜನ ಒಪ್ಪುತ್ತಾರಾ..?? ಅಥವ ಸೆಲ್ಫಿ , ಶೆಹಜಾದಾ, ಥ್ಯಾಂಕ್ ಗಾಡ್ , ಜೆರ್ಸಿ , ವಿಕ್ರಮ್ ವೇಧ ಸಿನಿಮಾಗಳಂತೆಯೇ ತಿರಸ್ಕರಿಸುತ್ತಾರಾ ಅನ್ನೋದು..
Bollywood , remake films era in bollywood , remakes are loosing , yet bollywood is behind remakes , why..??