ಮುಂಬೈ: ನಿನ್ನೆ ಅನುಮಾನಾಸ್ಪದವಾಗಿ ಮೃತಪಟ್ಟ ಬಾಲಿವುಡ್‍ನ ಎಂ.ಎಸ್ ಧೋನಿ ಎಂದೇ ಹೆಸರಾಗಿದ್ದ ನಟ ಸುಶಾಂತ್‍ಸಿಂಗ್ ರಜಪೂತ್ ಅಂತ್ಯಸಂಸ್ಕಾರ ಮುಂಬೈನಲ್ಲಿ ನಡೆಯಿತು. ಮುಂಬೈನ ವಿಲ್ಲೆ ಪಾರ್ಲೆ ಪ್ರದೇಶದಲ್ಲಿರುವ ಪವನ್ ಹನ್ಸ್ ಚಿತಾಗಾರದಲ್ಲಿ ಸುಶಾಂತ್ ಅಂತ್ಯಸಂಸ್ಕಾರ ನಡೆಸಲಾಯಿತು.
ಸುರಿಯುವ ಮಳೆಯ ನಡುವೆ ಸುಶಾಂತ್ ತಂದೆ, ತಾಯಿ, ಸಹೋದರಿ ಹಾಗೂ ಕುಟುಂಬ ಸದಸ್ಯರು, ಬಾಲಿವುಡ್‍ನ ನಟ-ನಟಿಯರು, ಸ್ನೇಹಿತರು ಮತ್ತು ಅಭಿಮಾನಿಗಳು ಭಾವಪೂರ್ಣ ವಿದಾಯ ಹೇಳಿದರು.
ನಿನ್ನೆ ಮುಂಬೈನ ಅಪಾರ್ಟ್‍ಮೆಂಟ್‍ವೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸುಶಾಂತ್ ಶವ ಸಿಕ್ಕಿತ್ತು. ಕೂಡಲೇ ವಿಷಯವನ್ನು ಸುಶಾಂತ್ ಕುಟುಂಬಸ್ಥರಿಗೆ ತಿಳಿಸಲಾಗಿತ್ತು. ಬಿಹಾರದಿಂದ ಅವರು ಇಂದು ಬೆಳಿಗ್ಗೆ ಮುಂಬೈಗೆ ಆಗಮಿಸಿದರು. ತಂದೆ-ತಾಯಿ ಹಾಗೂ ಕುಟುಂಬಸ್ಥರು ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಿದ ಬಳಿಕ ಪವನ್ ಹನ್ಸ್ ಚಿತಾಗಾರಕ್ಕೆ ಮೃತದೇಹವನ್ನು ಕೊಂಡೊಯ್ಯಲಾಯಿತು. ಅಲ್ಲಿ ರಜಪೂತ್ ಕುಟುಂಬದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಬಾಲಿವುಡ್‍ಗೆ ಎಂಟ್ರಿಯಾದ ಕೆಲವೇ ವರ್ಷಗಳಲ್ಲಿ ಜನಪ್ರಿಯತೆ ಗಳಿಸಿದ್ದ ಸುಶಾಂತ್, ತಮ್ಮ 34 ಹರೆಯದಲ್ಲೇ ಇಹಲೋಹದ ಪಯಣ ಮುಗಿಸಿದ್ದಾರೆ. ವಿ ಮಿಸ್ ಯು ಸುಶಾಂತ್….







