Koppala : ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಅಳಿಯನಿಂದ ಸೀರೆ ಹಂಚಿಕೆ…
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಬಿಜೆಪಿಯಿಂದ ಸೀರೆ ಹಂಚಿಕೆ ಮಾಡಲಾಗಿದೆ. ಯಲಬುರ್ಗಾ ಶಾಸಕ ಹಾಗೂ ಸಚಿವ ಹಾಲಪ್ಪ ಆಚಾರ್ ಫೋಟೊ ಇರುವ ಚೀಲದಲ್ಲಿ ಸೀರೆ ಹಂಚಿಕೆ ಹಂಚಲಾಗುತ್ತಿದ್ದು ಕ್ಷೇತ್ರದ ಗ್ರಾಮಗಳಲ್ಲಿ ಹಾಲಪ್ಪ ಆಚಾರ್ ಅಳಿಯ ಸೀರೆ ಹಂಚುತ್ತಿದ್ದಾರೆ.
ಕೈ ಚೀಲದ ಮೇಲೆ ಅಳಿಯ ಗೌರಾ ಬಸವರಾಜ ಹೆಸರು ಜಲಯಜ್ಞ ಅಂತಾ ಪ್ರಿಂಟ್ ಮಾಡಿ ಪ್ರಚಾರ ಮಾಡಲಾಗುತ್ತಿದೆ. 60 ರೂಪಾಯಿ ಸೀರೆ ಹಂಚಿ ಮತ ಸೆಳೆಯುತ್ತಿರುವ ಅಳಿಯ ಮಾವ ಎಂದು ಸಚಿವರ ವಿರುದ್ಧ ಕಾಂಗ್ರೆಸ್ ಛೀಮಾರಿ ಹಾಕಿದೆ.
ಕಳೆದ ಚುನಾವಣೆಯಲ್ಲಿ ಟೀ ಶರ್ಟ್, ಈ ಚುನಾವಣೆಯಲ್ಲಿ ಸೀರೆ ಹಂಚಿದ್ದಕ್ಕೆ ಹಾಲಪ್ಪ ಆಚಾರ ನಡೆಗೆ ಕಾಂಗ್ರೆಸ್ ಪಾಳೆಯದಿಂದ ಟೀಕೆ ವ್ಯಕ್ರವಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಛೀಮಾರಿ ಹಾಕುತ್ತಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಾಯಕರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಕೊಪ್ಪಳ ಜಿಲ್ಲಾ ಚುನಾವಣಾ ಅಧಿಕಾರಿಗಳು ಸೀರೆ ಸೀಜ್ ಮಾಡಿದ್ದಾರೆ. ಚುನಾವಣಾಧಿಕಾರಿ ಕಾವ್ಯ ರಾಣಿಯಿಂದ ಸೀರೆ ಸೀಜ್ ಮಾಡಿದ್ದಾರೆ. ಸೀರೆ ಹಂಚಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದ್ದು, ಮಾರ್ಚ್ 17ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದೆ.
Koppala: Saree distributed by son-in-law of BJP legislator in Yalaburga constituency…