ಅಹಮದಾಬಾದ್ ನಲ್ಲಿ ಫೆಬ್ರವರಿ 24 ರಂದು ನಡೆಯಲಿರುವ ಟ್ರಂಪ್ ಹಾಗೂ ಮೋದಿ ಅವರ ರೋಡ್ ಶೋನಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯ ಬಗ್ಗೆ ದೇಶ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಚರ್ಚೆಗಳಾಗುತ್ತಿವೆ. ಈ ಮಧ್ಯೆ ಭಾರತಕ್ಕೆ ಆಗಮಿಸುತ್ತಿರುವ ಟ್ರಂಪ್ ಅವರೇ ಹೇಳಿದ ಪ್ರಕಾರ ಈ ರೋಡ್ ಶೋನಲ್ಲಿ 70 ಲಕ್ಷ ಜನ ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದರು. ಆದ್ರೆ ಇದೀಗ ಟ್ರಂಪ್ ಅವರು ಹೇಳಿದ ಸಂಖ್ಯೆಗೂ ಗುಜರಾತ್ ಅಧಿಕಾರಿಗಳು ಕೊಟ್ಟ ಸಂಖ್ಯೆಗೂ ಅಜಗಜಾಂತರವಿದೆ. ನಗರ ಪಾಲಿಕೆ ಆಯುಕ್ತ ವಿಜಯ್ ನೆಹ್ರಾ, ‘ರೋಡ್ ಶೋನಲ್ಲಿ ಸುಮಾರು ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಅಹಮದಾಬಾದ್‌ನ ಒಟ್ಟು ಜನಸಂಖ್ಯೆಯೇ 70-80 ಲಕ್ಷದಷ್ಟಿದೆ.
ನಾನು ಚುನಾವಣೆಗೆ ಸ್ಪರ್ಧಿಸಲ್ಲ ಯಾಕೆ ಗೊತ್ತಾ? ರಿಯಲ್ ಸ್ಟಾರ್ ಉಪೇಂದ್ರ ನೀಡಿದ ಉತ್ತರ ಕೇಳಿ ದಂಗಾದ ಅಭಿಮಾನಿಗಳು
ಕನ್ನಡ ಚಿತ್ರರಂಗದ ವಿಭಿನ್ನ ಆಲೋಚನೆಗಳ ಸರದಾರ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕೀಯ ಎಂಬ ಹೊಸ ರಾಜಕೀಯ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಪ್ರಜಾಕೀಯ ಪಕ್ಷ ಸ್ಥಾಪನೆಯಾದಾಗಿನಿಂದಲೂ ಎಲ್ಲರ...








