ಭಾರತ ಶಾಂತಿಪ್ರಿಯ ರಾಷ್ಟ್ರ, ನಮಗೆ ಚೀನಾ ಅಥವಾ ಪಾಕ್ ನ ಭೂಪ್ರದೇಶ ಬೇಕಿಲ್ಲ – ನಿತಿನ್ ಗಡ್ಕರಿ

ಮುಂಬೈ, ಜೂನ್ 16: ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತ ಶಾಂತಿಪ್ರಿಯ ರಾಷ್ಟ್ರ, ನಾವು ಸೌಹಾರ್ದತೆಯನ್ನು ಬಯಸುತ್ತೇವೆ. ನಮಗೆ ಚೀನಾ ಅಥವಾ ಪಾಕಿಸ್ತಾನ ಅಥವಾ ಇನ್ಯಾವುದೇ ರಾಷ್ಟ್ರದ ಭೂಪ್ರದೇಶ ಬೇಕಿಲ್ಲ ಎಂದು ಹೇಳಿದ್ದಾರೆ.
ಗುಜರಾತ್‌ನಲ್ಲಿ ನಡೆದ ಬಿಜೆಪಿಯ ವರ್ಚುವಲ್ ‘ಜನ ಸಂವಾದ್’ ಸಮಾವೇಶದಲ್ಲಿ ಭಾರತ ಮತ್ತು ಚೀನಾ ನಡುವಿನ ಲಡಾಖ್ ಗಡಿ ವಿವಾದದ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ ಭಾರತ ಒಂದು ಕಡೆಯಿಂದ ಚೀನಾದೊಂದಿಗೆ ಮತ್ತು ಇನ್ನೊಂದು ಕಡೆಯಿಂದ ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ.

ಆದರೆ ನಾವೆಂದೂ ಗಡಿಯನ್ನು ಅತಿಕ್ರಮಿಸಲು ಪ್ರಯತ್ನಿಸಿಲ್ಲ. ಭಾರತದ ಭೂ ಪ್ರದೇಶವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದ್ದರೂ ನಾವು ಅತಿಕ್ರಮಣ ಮಾಡಿ ಪಡೆಯಲು ಹವಣಿಸಿಲ್ಲ. ಚೀನಾದ ಭೂ ಪ್ರದೇಶವೂ ನಮಗೆ ಬೇಕಾಗಿಲ್ಲ. ನಮ್ಮದು ಶಾಂತಿ ಪ್ರಿಯ ರಾಷ್ಟ್ರ, ನಮಗೆ ಅಹಿಂಸೆ ಬೇಕಾಗಿಲ್ಲ ಎಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.








