ಮಂಡ್ಯ : ಚಲನಚಿತ್ರ ನಟಿ ಮೇಘನಾ ಗಾಂವ್ಕರ್ ಹಾಗೂ ಚಿತ್ರ ನಿರ್ಮಾಪಕ ಸೂರಪ್ಪಬಾಬು ಕೆ.ಆರ್. ಪೇಟೆ ತಾಲ್ಲೂಕಿನ ಭೂವೈಕುಂಠ, ಭೂವರಾಹಸ್ವಾಮಿ ಕ್ಷೇತ್ರ ವರಹನಾಥಕಲ್ಲಹಳ್ಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರೇವತಿ ನಕ್ಷತ್ರದ ಅಂಗವಾಗಿ ಇಂದು ಭೂವರಾಹಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಪುರಸ್ಕಾರಗಳು ನಡೆದವು.
ಸಾವಿರ ಲೀಟರ್ ಹಾಲು, 500 ಲೀಟರ್ ಕಬ್ಬಿನ ಹಾಲು, ಎಳನೀರು, ಜೇನುತುಪ್ಪ, ಶ್ರೀಗಂಧ ಹಾಗೂ ಗಂಗಾಜಲದಿಂದ ಅಭಿಷೇಕ ಮಾಡಿ ಲಿಲ್ಲಿ, ಜಾಜಿ, ಸಂಪಿಗೆ, ಸುಗಂಧರಾಜ, ಕನಕಾಂಬರ, ಗುಲಾಬಿ, ಪವಿತ್ರ ಪತ್ರೆಗಳು, ತುಳಸಿ, ಕಮಲದ ಹೂವು, ಮಲ್ಲಿಗೆ ಸೇವಂತಿಗೆ, ಕೇದಿಗೆ ಸೇರಿದಂತೆ 58 ಬಗೆಯ ವಿವಿಧ ಪುಷ್ಪಗಳಿಂದ ಸ್ವಾಮಿಗೆ ಪುಷ್ಪಾಭಿಷೇಕ ಮಾಡಲಾಯಿತು.
ಇನ್ನೂ ದೇಶದಲ್ಲೇ ವಿಶಿಷ್ಟ ಎನಿಸಿಕೊಂಡ 17ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯ
ವರಹಾಸ್ವಾಮಿಯು ಭೂದೇವಿಯನ್ನು ತನ್ನ ಎಡತೊಡೆಯ ಮೇಲೆ ಕೂರಿಸಿಕೊಂಡಿರುವ ವಿಗ್ರಹ ಭಕ್ತರ ಮನಸೆಳೆಯಿತು.
ವಿಶೇಷ ಪೂಜೆಯಲ್ಲಿ ಚಲನಚಿತ್ರ ನಟಿ ಮೇಘನಾ ಗಾಂವ್ಕರ್, ಚಲನಚಿತ್ರ ನಿರ್ಮಾಪಕ ಸೂರಪ್ಪಬಾಬು, ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ ನಾನಾ ಭಾಗಗಳಿಂದ ಬಂದ ಭಕ್ತರು ಅಭಿಷೇಕವನ್ನು ಕಣ್ತುಂಬಿಕೊಂಡರು.








