ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಆಸ್ಪತ್ರೆಗೆ ದಾಖಲು
ಹೊಸದಿಲ್ಲಿ, ಜೂನ್ 16: ಜ್ವರ ಮತ್ತು ಉಸಿರಾಟದ ಸಮಸ್ಯೆಗಳಿಂದಾಗಿ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಇಂದು ಜೈನ್ ಅವರ ಕೊರೊನಾ ಪರೀಕ್ಷಾ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದ್ದು, ತೀವ್ರ ಜ್ವರ ಮತ್ತುಕಳೆದ ರಾತ್ರಿ ಆಮ್ಲಜನಕದ ಮಟ್ಟ ಹಠಾತ್ತನೆ ಕುಸಿದ ಕಾರಣ ಅವರನ್ನು ಆರ್ಜಿಎಸ್ಎಸ್ಎಚ್ಗೆ ದಾಖಲಿಸಲಾಗಿದೆ.

ಟ್ವಿಟರ್ ನಲ್ಲಿ ತಾವು ಆಸ್ಪತ್ರೆಗೆ ದಾಖಲಾಗಿರುವುದನ್ನು ದೃಢೀಕರಿಸಿರುವ ಸತ್ಯೇಂದರ್ ಜೈನ್ ‘ಕಳೆದ ರಾತ್ರಿ ತೀವ್ರ ಜ್ವರ ಮತ್ತು ನನ್ನ ಆಮ್ಲಜನಕದ ಮಟ್ಟ ಹಠಾತ್ತನೆ ಕುಸಿದ ಕಾರಣ ನನ್ನನ್ನು ಆರ್ಜಿಎಸ್ಎಸ್ಎಚ್ಗೆ ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.








