ಶಿವಮೊಗ್ಗ: ಶ್ವಾನವೊಂದು ನವಜಾತ ಹೆಣ್ಣು ಶಿಶುವನ್ನು ಕಚ್ಚಿಕೊಂಡು ಆಸ್ಪತ್ರೆಯ ಆವರಣದಲ್ಲಿ ಓಡಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಶ್ವಾನವೊಂದು ನವಜಾತ ಶಿಶುವನ್ನು ಕಚ್ಚಿಕೊಂಡು ಹೆರಿಗೆ ವಾರ್ಡ್‌ನ ಆವರಣದಲ್ಲಿ ಓಡಾಡಿದೆ. ಇದನ್ನು ಗಮನಿಸಿದ ನಾಗರಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಗಿಸಿದ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿದ್ದಾರೆ. ನಾಯಿ ಶಿಶುವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದೆ.
ನಂತರ ವೈದ್ಯರ ಬಳಿ ಶಿಶು ತೆಗೆದುಕೊಂಡು ಹೋಗಲಾಗಿದೆ. ಆದರೆ, ಮಗು ಜನಿಸಿದ ನಂತರ ಯಾರೋ ಪಾಪಿಗಳು ಮಗುವನ್ನು ವಾರ್ಡ್ ನ ಹಿಂಭಾಗದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಗುವನ್ನು ಬಿಟ್ಟು ಹೋದ ಪೋಷಕರ ಪತ್ತೆ ಹೆಚ್ಚುವಂತೆ ಆಸ್ಪತ್ರೆಯ ಸಿಬ್ಬಂದಿ ಆಗ್ರಹಿಸಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








