ಲಕ್ನೋ : ಮೊಘಲ್ ಸಾಮ್ರಾಜ್ಯದ (Mughal empire) ಅಧ್ಯಾಯಗಳನ್ನು ಸಿಬಿಎಸ್‍ಸಿ (CBSE) ಹಾಗೂ 12ನೇ ತರಗತಿಯ ಬೋರ್ಡ್ (PUC Board) ನ ಪಠ್ಯದಿಂದ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ತೆಗೆದು ಹಾಕಿದೆ.
ಎನ್‌ಸಿಇಆರ್‌ಟಿ (NCERT) ಇತಿಹಾಸ ಪಠ್ಯಕ್ರಮ ಪರಿಷ್ಕರಿಸಿದೆ. ನೂತನ ಪಠ್ಯ ಪುಸ್ತಕದಲ್ಲಿ 12ನೇ ತರಗತಿಯ ಮಧ್ಯಕಾಲಿನ ಇತಿಹಾಸ ಪಠ್ಯಪುಸ್ತಕಗಳಿಂದ (Textbooks) ಕಿಂಗ್ಸ್ ಮತ್ತು ಕ್ರಾನಿಕಲ್ಸ್, ದಿ ಮೊಘಲ್ ಕೋರ್ಟ್ಸ್ (Mughal Courts) ಅಧ್ಯಾಯಗಳನ್ನು ಕೈಬಿಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಬ್ರಜೇಶ್ ಪಾಠಕ್ ನಾವು ನಮ್ಮ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಬಳಸಿ ಕಲಿಸುತ್ತೇವೆ. ಪರಿಷ್ಕೃತ ಆವೃತ್ತಿಯಲ್ಲಿ ಏನಿದೆಯೋ ಅದನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.
10 ಮತ್ತು 11ನೇ ತರಗತಿಯ ಪಠ್ಯಪುಸ್ತಕಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. 10ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕಗಳಿಂದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ (Democracy and Diversity), ಪ್ರಮುಖ ಹೋರಾಟಗಳು ಮತ್ತು ಚಳುವಳಿಗಳು ಎಂಬ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ.








