ಹಾಸನ ನಗರದ ಸರ್ಕಾರಿ ಆಸ್ಪತ್ರೆ ಎದುರು ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಯುವಕನೊಬ್ಬನಿಗೆ ಚಪ್ಪಲಿಯಿಂದ ಧರ್ಮದೇಟು ಸಿಕ್ಕಿರುವ ಘಟನೆ ನಡೆದಿದೆ.
ಯುವತಿಯನ್ನು ರೇಗಿಸಿದಲ್ಲದೆ ಆ ಯುವಕ, ಯುವತಿ ಮೇಲೆ ಕೈ ಮಾಡಿದ್ದಾನೆ. ಹೀಗಾಗಿ ಯುವತಿಯು, ನಡು ರಸ್ತೆಯಲ್ಲಿಯೇ ಚಪ್ಪಲಿಯಿಂದ ಹೊಡೆದಿದ್ದಾಳೆ. ಸ್ಥಳೀಯರು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪುಂಡರ ಹಾವಳಿ ಹೆಚ್ಚಾಗಿದ್ದು ಹಗಲಿನಲ್ಲಿಯೇ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ರೋಪಿಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಯುವಕನನ್ನು ನಗರ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








