ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಕೆಆರ್ ಪಿಪಿ(KRPP) ಸಮಾವೇಶದಲ್ಲಿ ಸ್ವಾಮೀಜಿಯೊಬ್ಬರು ಅಭ್ಯರ್ಥಿಗೆ 1 ಲಕ್ಷ ರೂ. ನೀಡಿ, ನೀತಿ ಸಂಹಿತೆ(Code Of Conduct) ಉಲ್ಲಂಘಿಸಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ (Janardhana Reddy) ಸಮ್ಮುಖದಲ್ಲಿಯೇ ಅಭ್ಯರ್ಥಿಗೆ 1 ಲಕ್ಷ ರೂ. ಹಣ (Money) ನೀಡಿದ್ದಾರೆ. ಕುಡುಚಿ ಮತ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಶ್ರೀಶೈಲ ಭಜಂತ್ರಿ ಅವರಿಗೆ 1 ಲಕ್ಷ ರೂ. ಹಣವನ್ನು ಹೊನ್ಯಾಳದ ರೇವನಸಿದ್ದಯ್ಯ ಶ್ರೀಶೈಲಯ್ಯ ಶ್ರೀಗಳು ನೀಡಿದ್ದಾರೆ.
ಸಮಾವೇಶದಲ್ಲಿ ಬಹಿರಂಗವಾಗಿ ನೀತಿ ಸಂಹಿತೆ ಉಲ್ಲಂಘಿಸಿದರೂ ರಾಯಬಾಗಾ ತಾಲೂಕಾಡಳಿತ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಚೆಕ್ ಪೋಸ್ಟ್ಗಳ ಕಣ್ಣು ತಪ್ಪಿಸಿ 1 ಲಕ್ಷ ರೂ.ಗಳನ್ನು ಸ್ವಾಮೀಜಿ ಹೇಗೆ ತಂದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








