ಬೆಂಗಳೂರು : ನಗರದ ಹಲವೆಡೆ ವ್ಯಾಪಕ ಮಳೆಯಾಗಿರುವ ಹಿನ್ನೆಲೆಯಲ್ಲಿ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಹೀಗಾಗಿ ಹಲವು ವಿಮಾನಗಳನ್ನು ಬೇರೆ ಏರ್ ಪೋರ್ಟ್ ಗೆ ಡೈವರ್ಟ್ ಮಾಡಲಾಗಿದೆ.
ಬಿರುಗಾಳಿ ಸಹಿತ ಮಳೆಯಾಗಿರುವ ಹಿನ್ನೆಲೆಯಲ್ಲಿ ಸುಮಾರು 8 ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ದೇವನಹಳ್ಳಿಯಲ್ಲಿ ಭರ್ಜರಿ ಮಳೆಯಾಗಿದ್ದು, 19 ವಿಮಾನಗಳ ಲ್ಯಾಂಡಿಂಗ್ನಲ್ಲಿ ವ್ಯತ್ಯಯ ಉಂಟಾಗಿದೆ.
ಕೆಲ ವಿಮಾನಗಳು ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಜೋಧ್ಪುರ, ಮುಂಬೈ, ರಾಜ್ಕೋಟ್, ದುಬೈ, ಪಾಟ್ನಾ, ಬರೇಲಿ ಮತ್ತು ಇಂದೋರ್ನಿಂದ ಬರುತ್ತಿದ್ದ ವಿಮಾನಗಳನ್ನು ಬೇರೆ ಏರ್ಪೋರ್ಟ್ಗೆ ಕಳುಹಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ತೆರಳಬೇಕಿದ್ದ ವಿಮಾನಗಳಲ್ಲಿಯೂ ವ್ಯತ್ಯಯ ಉಂಟಾಗಿದೆ. ಹೀಗಾಗಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
ಯಲಹಂಕ ಸುತ್ತಮುತ್ತ ಭರ್ಜರಿ ಮಳೆಯಾಗಿದೆ. ಹಲವೆಡೆ ದ್ವಿಚಕ್ರ ವಾಹನ ಹಾಗೂ ಗೂಡ್ಸ್ ಆಟೋ ಮಳೆ ನೀರಿನಲ್ಲಿ ಮುಳುಗಿವೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಾಗದೆ ಕಾರು ಚಾಲಕರು ಪರದಾಡುವಂತಾಗಿದೆ. ರಸ್ತೆ ಕಾಣದೆ ಕಾರುಗಳು ನಿಂತಲ್ಲೆ ನಿಂತಿವೆ.








