ಒಳ ಮೀಸಲಾತಿ ವಿರೋಧಿಸಿ ಹಲವು ತಾಂಡಾಗಳಲ್ಲಿ ಮತದಾನ ಬಹಿಷ್ಕಾರ ಮಾಡಿರುವ ಕುರಿತು ವರದಿಗಳಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಕೊಪ್ಪಳ ಹತ್ತಿರದ ಬಹದ್ದೂರ ಬಂಡಿಯಲ್ಲಿ ಸಭೆ ನಡೆದಿದ್ದು, ಮತದಾನ ಮಾಡುವಂತೆ ಮನವಿ ಮಾಡಲಾಗಿದೆ.
ಸಭೆಯಲ್ಲಿ ಮತದಾನ ಬಹಿಷ್ಕಾರ ಮಾಡದಂತೆ ಬಂಜಾರ ಸಮಾಜ ನಿರ್ಧರಿಸಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಮತದಾನ ಹಕ್ಕಿನಿಂದ ದೂರವಾಗಬಾರದು. ಒಳ ಮೀಸಲಾತಿಯ ಬಗ್ಗೆ ಕಾನೂನು ಹೋರಾಟ ಮಾಡೋಣ. ಆದರೆ, ಮತದಾನ ಬಹಿಷ್ಕರಿಸುವುದು ಬೇಡ ಎಂದು ಮುಖಂಡರು ನಿರ್ಧರಿಸಿದ್ದಾರೆ. ರಾಜ್ಯ ಸರಕಾರ ಒಳಮೀಸಲಾತಿ ಶಿಫಾರಸ್ಸು ಮಾಡಿದ ನಂತರ ಅಲ್ಲಲ್ಲಿ ತಾಂಡಾಗಳಲ್ಲಿ ಮತದಾನ ಬಹಿಷ್ಕಾರ ಮಾಡಿವೆ. ಮುಂದೆ ಅವರು ಮತದಾನ ಮಾಡುತ್ತಾರೆಯೋ ಕಾಯ್ದು ನೋಡಬೇಕಿದೆ.








