ಬೆಂಗಳೂರು : ರಾಜ್ಯದಲ್ಲಿ ನಂದಿನಿ ಉಳಿಸಿ (#SaveNandini) ಅಭಿಯಾನದ ಕಾವು ಜೋರಾಗುತ್ತಿದೆ. ಇದರ ಮಧ್ಯೆ ಅಮುಲ್ (Amul) ಆನ್ ಲೈನ್ ನಲ್ಲಿ ವಿಸ್ತರಣೆಗೊಳ್ಳುತ್ತಿದೆ. ಕೆಎಂಎಫ್ (KMF)- ಅಮುಲ್ ಹೆಸರಲ್ಲಿ ಮತ್ತೆ ರಾಜಕೀಯ ಜಟಾಪಟಿ ಶುರುವಾಗಿದೆ. ಹೀಗಾಗಿ ಇಂದು ಕನ್ನಡಪರ ಸಂಘಟನೆಗಳು ಕೂಡ ಬೀದಿಗಿಳಿದು ಹೋರಾಟ ನಡೆಸುತ್ತಿವೆ.
ನಂದಿನಿಯೊಂದಿಗೆ ಅಮುಲ್ ಉತ್ಪನ್ನು ವಿಲೀನಗೊಳಿಸುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದವು. ಅಮುಲ್ ಚೀಸ್, ಅಮುಲ್ ಬೆಣ್ಣೆ, ತುಪ್ಪ ಹೀಗೆ ಅಮುಲ್ ಪ್ರಾಡಕ್ಟ್ ಗಳನ್ನು ನೆಲಕ್ಕೆಸೆದು ಆಕ್ರೋಶ ಹೊರಹಾಕಿದರು. ಅಲ್ಲದೇ, ಮತ್ತೊಂದು ಕಡೆ ಅಮುಲ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ರಾಜಧಾನಿಯ ಮೈಸೂರು ಬ್ಯಾಂಕ್ ಸರ್ಕಲ್ (Mysuru Bank Circle) ನಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಅಮುಲ್ ಉತ್ಪನ್ನ ಆನ್‍ಲೈನ್ ಮಾರಾಟ ಖಂಡಿಸಿದೆ. ಅಲ್ಲದೇ, ಅಮುಲ್ ಫ್ಯಾಕ್ಟರಿ ಹಾಲಿನ ಮಾರಾಟ ಘಟಕ್ಕೆ ದಾಳಿ ಮಾಡಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ನಂದಿನಿ (Nandini) ಯನ್ನು ಮುಚ್ಚುವ ಹುನ್ನಾರ.ದಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ರೀತಿ ಮಾಡುತ್ತಿವೆ ಎಂದು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.








