ಚೀನಾ ದಾಳಿ ಸಹಿಸಲಾಗುವುದಿಲ್ಲ ರಣದೀಪ ಸರ್ಜೇವಾಲ
ನವದೆಹಲಿ : ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ನಡೆಸಿದೆ ದಾಳಿ ಬಗ್ಗೆ ಕಾಂಗ್ರೆಸ್ ವಕ್ತಾರ ರಣದೀಪ ಸುರ್ಜೇವಾಲ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಚೀನಾ ಸೈನಿಕರ ನಡೆ ಅಘಾತಕಾರಿಯಾಗಿದೆ. ಅದನ್ನು ಸಹಿಸಲಾಗುವುದಿಲ್ಲ. ಅಲ್ಲದೆ ಲಡಾಕ್ ಗಡಿಯಲ್ಲಿ ಏನಾಗುತ್ತಿದೆ ಎಂದು ರಕ್ಷಣಾ ಸಚಿವರು ಮಾಹಿತಿ ನೀಡಬೇಕು ಎಂದು ಸುರ್ಜೇವಾಲ ಒತ್ತಾಯಿಸಿದ್ದಾರೆ.
ಪೂರ್ವ ಲಡಾಖ್ ನ ಗಲ್ವಾನ್ ವ್ಯಾಲಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಗಡಿ ವಿಚಾರಕ್ಕೆ ಸಂಘರ್ಷವಾಗಿದೆ. ಈ ಸಮಯದಲ್ಲಿ ಉಭಯ ಬಣಗಳ ಸೈನಿಕರ ನಡುವೆ ವಾಕ್ಸಮರೆ ಶುರುವಾಗಿದೆ. ಪರಿಸ್ಥಿತಿ ಕೈ ಮೀರಿದಾಗ ಹೊಡೆದಾಟ ಪ್ರಾರಂಭವಾಗಿದೆ. ಈ ವೇಳೆ ಚೀನಿ ಸೈನಿಕರು ಭಾರತ ಸೇನೆಯ ಓರ್ವ ಅಧಿಕಾರಿ ಮತ್ತು ಇಬ್ಬರು ಸೈನಿಕರನ್ನು ಕೊಂದಿದೆ ಎಂದು ತಿಳಿದು ಬಂದಿದೆ.








