ಚಿಕ್ಕಮಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತೀವ್ರ ಹೊಟ್ಟೆ ನೋವಿನಿಂದ ಚಿಕ್ಕಮಗಳೂರು (Chikkamagaluru) ನಗರದ ಆಶ್ರಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಜೆಪಿ (BJP) ಕಾರ್ಯಕರ್ತರ ಸಭೆಯಲ್ಲಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸಿ.ಟಿ. ರವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಕೂಡಲೇ ಬಿಜೆಪಿ ಕಚೇರಿಯಿಂದ ಆಶ್ರಯ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ. ಈ ಸಂದರ್ಭದಲ್ಲಿ ಕಿಡ್ನಿಯಲ್ಲಿ 12 ಎಂ.ಎಂ. ಕಲ್ಲು ಇರುವುದಾಗಿ ವೈದ್ಯರ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವೈದ್ಯರು ಮಾತನಾಡಿ, ಸ್ಟಂಟ್ ಮೂಲಕ ಕಲ್ಲುಗಳ ರವಾನೆ ಮಾಡಲಾಗುವುದು. ಇಂದು ಒಂದು ದಿನ ವಿಶ್ರಾಂತಿಯಲ್ಲಿರಲು ಸಿ.ಟಿ ರವಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿನ ಮಾಜಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರ ಆಶ್ರಯ ಆಸ್ಪತ್ರೆಯಲ್ಲಿ ಸಿ.ಟಿ ರವಿ ದಾಖಲಾಗಿದ್ದಾರೆ.








