ಕಲಬುರಗಿ : ಬಿಜೆಪಿಯಿಂದ ಸಾಕಷ್ಟು ಅಧಿಕಾರ ಅನುಭವಿಸಿ ಪಕ್ಷ ತೊರೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Laxman Savadi) ಇಬ್ಬರೂ ಮುಂದೆ ಅನುಭವಿಸುತ್ತಾರೆ ಎಂದು ಬಿಜೆಪಿ (BJP) ನಾಯಕ ಅರುಣ್ ಸಿಂಗ್ (Arun Singh) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸವದಿ ಹಾಗೂ ಶೆಟ್ಟರ್ ಇಬ್ಬರೂ ಬಿಜೆಪಿಯಿಂದ ಅಧಿಕಾರ ಅನುಭವಿಸಿದವರೆ. ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು, ಸವದಿ ಸೋತರೂ ಡಿಸಿಎಂ ಸ್ಥಾನ ನೀಡಲಾಗಿತ್ತು. ಆದರೂ ಈಗ ಶಾಸಕ ಸ್ಥಾನಕ್ಕಾಗಿ ಪಕ್ಷ ತೊರೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನಾಯಕತ್ವದಲ್ಲಿ ಕೆಲಸ ಮಾಡುವುದು ಗೌರವದ ವಿಚಾರವಾಗಿದೆ. ಆಂತಹ ಅವಕಾಶ ಇದ್ದರೂ ಅದರಿಂದ ದೂರ ಹೋದವರು ಭವಿಷ್ಯದಲ್ಲಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.








