ಹುಬ್ಬಳ್ಳಿ: ಚೀನಾ ದೇಶ ಅಕ್ರಮಣಕಾರಿ ನೀತಿಯನ್ನ ಅನುಕರಣೆ ಮಾಡುತ್ತಿದೆ. ಅಕ್ಕಪಕ್ಕದ ರಾಷ್ಟ್ರದ ಜೊತೆಗೆ ಸ್ನೇಹದಿಂದ ಇರಬೇಕು ಎನ್ನುವ ಭಾವನೆ ಚೀನಾಕ್ಕೆ ಇಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇಂದು ಹುಬ್ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಭಾರತದ ಗಡಿಯಲ್ಲಿ ಚೀನಾ ತಗಾದೆ ತಗೆದಿದೆ. ಚೀನಾ ಯಾವಾಗಲೂ ತನ್ನ ಕುತಂತ್ರ ಬುದ್ಧಿ ತೋರಿಸುತ್ತಿದೆ. ಇದು ಹೊಸದೆನಲ್ಲ ಜವಾಹರಲಾಲ್ ನೆಹರು ಪ್ರಧಾನಮಂತ್ರಿ ಇದ್ದಾಗಲೂ ಕೂಡ ಈ ರೀತಿ ವರ್ತಿಸಿದ್ದಾರೆ. ನಂಬಿಕೆಗೆ ಅನರ್ಹವಾದ ದೇಶ ಯಾವುದೆಂದರೆ ಅದು ಚೀನಾ. ನಮ್ಮ ಭಾರತ ದೇಶ ಬಲಾಢ್ಯವಾಗಿದೆ, ಮೋದಿಯವರ ನಾಯಕತ್ವದಲ್ಲಿ ಇದನ್ನ ಎದುರಿಸುವ ಶಕ್ತಿ ಇದೆ ಎಂದು ಸಚಿವರು ಹೇಳಿದ್ದಾರೆ.







